Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಕೆಬಿಆರ್ ರಾಷ್ಟ್ರೀಯ ಉದ್ಯಾನವನ

ಕೆಬಿಆರ್ ರಾಷ್ಟ್ರೀಯ ಉದ್ಯಾನವನ, ಹೈದರಾಬಾದ್

3

ಕಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವನ ಅಥವಾ ಕೆಬಿಆರ್ ರಾಷ್ಟ್ರೀಯ ಉದ್ಯಾನವನವು ಹೈದರಬಾದಿನ ಅತ್ಯಂತ ಐಶಾರಾಮಿ ಜನವಸತಿ ಪ್ರದೇಶವಾಗಿರುವ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಒಳಗಡೆ ಯುವರಾಜ ಮುಕರ್ರಂ ಜಹನ ಚಿರನ್ ಅರಮನೆ ಸಹ ಇದೆ. ಕೆಬಿಆರ್ ರಾಷ್ಟ್ರೀಯ ಉದ್ಯಾನವನವು "ಕಾಂಕ್ರೀಟ್ ಕಾಡಿನ ಒಳಗಡೆ ಇರುವ ದಟ್ಟಕಾಡು" ಎಂದು ಖ್ಯಾತಿ ಪಡೆದಿದೆ. ಈ ಅರಮನೆ ಮತ್ತು ಅದರ ಸುತ್ತ ಮುತ್ತಲ ಪ್ರದೇಶಕ್ಕೆ 1998ರಲ್ಲಿ ರಾಷ್ಟ್ರೀಯ ಉದ್ಯಾನವನದ ಮಾನ್ಯತೆಯನ್ನು ನೀಡಲಾಯಿತು. ಈ ಪ್ರದೇಶಕ್ಕೆ ಹೊಸ ಹೆಸರು ನೀಡಲಾಗಿದೆ. ಅದರ ಜೊತೆಗೆ ಇಲ್ಲಿನ ಅರಮನೆಯ ಹೆಸರನ್ನು ಯಥಾಸ್ಥಿತಿಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಉದ್ಯಾನವನದಲ್ಲಿ ಬೆಳಗ್ಗೆ ಮತ್ತು ಸಂಜೆ ತಾಜಾ ಹವೆಯನ್ನು ಸೇವಿಸಲು ಆಗಮಿಸುವ ವಾಯುವಿಹಾರಿಗಳಿಂದ ಮತ್ತು ವ್ಯಾಯಾಮಗಳಿಂದಾಗಿ ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ.

ನೀವು ಇಲ್ಲಿಗೆ ಈ ಸಮಯದಲ್ಲಿ ಭೇಟಿಕೊಟ್ಟರೆ ಹಲವಾರು ಮಂದಿ ಓಡುತ್ತಲೊ ಅಥವಾ ವ್ಯಾಯಾಮ ಮಾಡುತ್ತಲೊ ಇರುವುದನ್ನು ಕಾಣಬಹುದು. ಇದರ ಜೊತೆಗೆ ಈ ಉದ್ಯಾನವನವು ಹಲವಾರು ಪಕ್ಷಿ ಮತ್ತು ಚಿಟ್ಟೆ ಪ್ರಭೇದಗಳಿಗೆ ಆಶ್ರಯವನ್ನೊದಗಿಸಿದೆ. ಈ ಉದ್ಯಾನವನದಲ್ಲಿ ನವಿಲುಗಳನ್ನು , ಕಾಡು ಬೆಕ್ಕುಗಳನ್ನು, ಪ್ಯಾಂಗೋಲಿನ್‍ಗಳನ್ನು ಮತ್ತು ಭಾರತೀಯ ಪುನುಗು ಬೆಕ್ಕನ್ನು ಕಾಣಬಹುದು. ಇಲ್ಲಿರುವ ಪ್ರಾಣಿಗ ಮತ್ತು ಪಕ್ಷಿಗಳು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹಲವಾರು ಕೊಳಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಾಣಿಗಳಿಗೆ ತಿನಿಸುಗಳನ್ನು ನೀಡುವುದನ್ನು ನಿರ್ಬಂಧಿಸಲಾಗಿದೆ.

One Way
Return
From (Departure City)
To (Destination City)
Depart On
04 May,Mon
Return On
05 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
04 May,Mon
Check Out
05 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
04 May,Mon
Return On
05 May,Tue