Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಹೈದರಬಾದ್ ಬೊಟಾನಿಕಲ್ ಉದ್ಯಾನವನ

ಹೈದರಬಾದ್ ಬೊಟಾನಿಕಲ್ ಉದ್ಯಾನವನ, ಹೈದರಾಬಾದ್

3

ಹೈದರಬಾದ್ ಬೊಟಾನಿಕಲ್ ಉದ್ಯಾನವನವನ್ನು ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಬೊಟಾನಿಕಲ್ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ. ಇದು ಸ್ಥಳೀಯರ ಮತ್ತು ಪ್ರವಾಸಿಗರ ವಲಯದಲ್ಲಿ ಅತ್ಯಂತ ಜನಪ್ರಿಯ ಉದ್ಯಾನವನವಾಗಿದೆ. ಈ ಉದ್ಯಾನವನವು ಹೈ- ಟೆಕ್ ಸಿಟಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಹೈದರಬಾದ್ ರೈಲು ನಿಲ್ದಾಣದಿಂದ 16 ಕಿ.ಮೀ ದೂರದಲ್ಲಿದೆ. ಈ ಉದ್ಯಾನವನವು ಹೈದರಬಾದ್- ಮುಂಬಯಿ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಈ ಉದ್ಯಾನವನವನ್ನು ಮುಖ್ಯವಾಗಿ ಬೀಜೋತ್ಪತಿ ಮತ್ತು ಸಂರಕ್ಷಣಾ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಈ ಕಾರ್ಯಕ್ಕೆ ಅನುಕೂಲಕರವಾದ ಆಧುನಿಕ ಉಪಕರಣಗಳನ್ನು ಇಲ್ಲಿ ಉಪಯೋಗಿಸಲಾಗುತ್ತಿದೆ.

ಈ ಉದ್ಯಾನವನವನ್ನು ವಿಹಾರದ ಉದ್ದೇಶಕ್ಕಾಗಿಯಷ್ಟೇ ಅಲ್ಲದೆ ಜನರಿಗೆ ನಗರದ ಸುತ್ತ ಮುತ್ತ ಇರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಸಂರಕ್ಷಣೆ ಮಾಡುವ ಬಗೆ ಹೇಗೆ? ಎಂದು ತಿಳಿಸುವ ಶೈಕ್ಷಣಿಕ ಉದ್ದೇಶಕ್ಕಾಗಿಯು ಸಹ ಬಳಸಲಾಗುತ್ತದೆ. ಈ ಸಸ್ಯೋದ್ಯಾನವನದಲ್ಲಿ ಸಾರ್ವಜನಿಕರಿಗಾಗಿ ಐದು ವಿಭಾಗಗಳನ್ನು ತೆರೆದಿಡಲಾಗಿದೆ. ಈ ವಿಭಾಗಗಳಲ್ಲಿ ಔಷಧೀಯ ಗಿಡಮೂಲಿಕೆಗಳು, ಅಲಂಕಾರಿಕ ಸಸ್ಯಗಳು, ಜಲ ಸಸ್ಯಗಳು, ಮರಮುಟ್ಟುಗಳಿಗಾಗಿ ಬಳಸಲಾಗುವ ಮರಗಳು, ಬಿದಿರಿನ ಬೊಂಬುಗಳು, ಹಣ್ಣಿನ ಮರಗಳು ಮತ್ತು ಇತ್ಯಾದಿ ಮರಗಳನ್ನು ಕಾಣಬಹುದು. ನೀವು ಪರಿಸರ ಆಸಕ್ತರಾಗಿಲ್ಲದಿದ್ದರು ಸಹ ಈ ಉದ್ಯಾನವನಕ್ಕೆ ಒಂದು ಭೇಟಿಕೊಡುವುದರಿಂದ ಒಂದು ಸುಂದರವಾದ ಉದ್ಯಾನವನವನ್ನು ನೋಡಿದ ಸಾರ್ಥಕತೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಉದ್ಯಾನವನದಲ್ಲಿ ಸುಂದರವಾದ ಹುಲ್ಲು ಹಾಸುಗಳು, ನೀರಿನ ಕಾರಂಜಿ ಮತ್ತು ಕೊಳಗಳು ಹಾಗು ತಿರುಗುವ ಬೆಟ್ಟಗಳ ನೋಡುಗರ ಕಣ್ಮನವನ್ನು ಸೆಳೆಯುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu