Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಹೈ-ಟೆಕ್ ಸಿಟಿ

ಹೈ-ಟೆಕ್ ಸಿಟಿ, ಹೈದರಾಬಾದ್

3

ಹೈಟೆಕ್ ಸಿಟಿ ಅಥವಾ ಹೈದರಬಾದ್ ಇನ್ಫಾರ್ಮೇಶನ್ ಟೆಕ್ನಾಲಾಜಿ ಇಂಜಿನಿಯರಿಂಗ್ ಕಾನ್ಸಲ್ಟೇನ್ಸಿ ಸಿಟಿಯು ಹೈದರಬಾದಿನ ಪ್ರಮುಖ ಟೌನ್‍ಶಿಪ್ ಆಗಿದೆ. ಈ ಟೌನ್‍ಶಿಪ್ ಹೈದರಬಾದಿನ ಉಪನಗರಗಳಾದ ಮಾಧಪುರ್ ಮತ್ತು ಗಚಿಬೌಲಿಗಳಿಗೆ ಅತ್ಯಂತ ಸಮೀಪದಲ್ಲಿದೆ. ಸಹಸ್ರ ಮಾನದ ಆರಂಭದಲ್ಲಿ ಬೆಂಗಳೂರಿನ ನಂತರ ಮಾಹಿತಿ ತಂತ್ರಙ್ಞಾನದ ನೆಲೆಯಾಗಿ ಗುರುತಿಸಿಕೊಂಡ ನಗರ ಹೈದರಬಾದ್. ಆಂಧ್ರಪ್ರದೇಶ್ ಮುಖ್ಯಮಂತ್ರ ಚಂದ್ರಬಾಬು ನಾಯ್ಡುರವರು ಹೈದರಬಾದನ್ನು ಪ್ರಮುಖ ಐಟಿ ತಾಣವನ್ನಾಗಿ ಮಾಡಬೇಕೆಂದು ಬಹಳಷ್ಟು ಶ್ರಮಿಸಿದರು. ಅವರು ಹಲವಾರು ಐಟಿ ಕಂಪೆನಿಗಳನ್ನು ಹೈದರಬಾದಿಗೆ ಆಹ್ವಾನಿಸಿ, ಅವುಗಳ ಕಛೇರಿಗಳನ್ನು ಮತ್ತು ಕಂಪೆನಿಗಳನ್ನು ಇಲ್ಲಿ ಸ್ಥಾಪಿಸಲು ಬೇಕಾಗುವ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿದರು. ಮೊದಲ ಹಂತದ ಹೈಟೆಕ್ ಸಿಟಿಯ ಯೋಜನೆಯಲ್ಲಿ ಸೈಬರ್ ಟವರ್ ನಿರ್ಮಾಣಗೊಂಡಿತು.

ಆನಂತರ ಎರಡನೆ ಹಂತದಲ್ಲಿ ಸೈಬರ್ ಗೇಟ್ ವೇ ನಿರ್ಮಾಣಗೊಂಡಿತು. ಸೈಬರ್ ಟವರ್ ನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕಛೇರಿಗಳು ಆರಂಭಗೊಂಡವು. ಇವುಗಳಲ್ಲಿ ಜಿ ಇ ಕ್ಯಾಪಿಟಲ್ ಮತ್ತು ಒರೇಕಲ್ ಕಾರ್ಪೋರೇಷನ್‍ನಂತಹ ಕಂಪನಿಗಳು ಸೇರಿದ್ದವು. ಇಂದು ಹೈಟೆಕ್ ಸಿಟಿಯು ಸೈಬರ್ ಸಿಟಿ ಎಂದು ಸಹ ಕರೆಯಲ್ಪಡುತ್ತದೆ. ಪ್ರಸ್ತುತ ಇಲ್ಲಿ ಸತ್ಯಂ ಕಂಪ್ಯೂಟರ್ಸ್, ವಿಪ್ರೋ, ಟಾಟಾ ಕಾನ್ಸಲ್ಟೆನ್ಸಿ ಸರ್ವಿಸಸ್, ಮೈಂಡ್ ಸ್ಪೇಸ್ ಮತ್ತು ಎಲ್ ಅಂಡ್ ಟಿ, ಇನ್ಫ಼ೋಸಿಸ್, ಎಪಿಐಐಸಿ, ಐಬಿಎಮ್, ಗೂಗಲ್ ಮತ್ತು ಇತ್ಯಾದಿ ಕಂಪೆನಿಗಳು ಇಲ್ಲಿ ನೆಲೆಗೊಂಡಿವೆ. ಇನ್ಫೋಸಿಸ್ ಹಾಗು ಇನ್ನಿತರ ಕಂಪೆನಿಗಳು ಹೈಟೆಕ್ ಸಿಟಿಯಲ್ಲಿ ತಮ್ಮ ಹಾಗು ತಮ್ಮ ನೌಕರರ ಅಗತ್ಯತೆಗಳನ್ನು ಪೂರೈಸುವಂತಹ ಸ್ವಾವಲಂಬಿ ಘಟಕಗಳನ್ನು ಸ್ಥಾಪಿಸಿಕೊಂಡಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed