Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಹಯತ್ ಬಕ್ಷಿ ಬೇಗಂ ಮಸೀದಿ

ಹಯತ್ ಬಕ್ಷಿ ಬೇಗಂ ಮಸೀದಿ, ಹೈದರಾಬಾದ್

1

ಹಯತ್ ಬಕ್ಷಿ ಬೇಗಂ ಮಸೀದಿ ಅಥವಾ ಹಯತ್ ಬಕ್ಷಿ ಮಸೀದಿ ಹಾಗು ಹಯತ್ ನಗರ್ ದೊಡ್ಡ ಮಸೀದಿ ಎಂದು ಸಹ ಕರೆಯಲ್ಪಡುತ್ತದೆ. ಈ ಮಸೀದಿಯು ಹೈದರಬಾದಿನ ಮುಸಲ್ಮಾನರ ವಲಯದಲ್ಲಿ ಧಾರ್ಮಿಕವಾಗಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ಮಸೀದಿಯ ನಿರ್ಮಾಣವನ್ನು ಗೋಲ್ಕೊಂಡಾದ ಐದನೆಯ ನಿಜಾಮನಾದ ಅಬ್ದುಲ್ಲಾ ಖುತುಬ್ ಷಾಹನು ಆರಂಭಿಸಿದನು. ಹಾಗೆಯೇ ಇದು 1672ರಲ್ಲಿ ಪೂರ್ಣಗೊಂಡಿತು. ಖುತುಬ್ ಷಾಹಿ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣಗೊಂಡ ಇನ್ನಿತರ ಮಸೀದಿಗಳಂತೆ, ಇದು ಸಹ ಖುತುಬ್ ಷಾಹಿ ಶೈಲಿಯಲ್ಲಿ ನಿರ್ಮಾಣಗೊಂಡಿದೆ.ಈ ಮಸೀದಿಯನ್ನು ಕೇವಲ ಪ್ರಾರ್ಥನೆಯ ಸಲುವಾಗಿಯಷ್ಟೇ ಅಲ್ಲದೆ ಪ್ರವಾಸಿಗರು ತಮ್ಮ ಪ್ರಯಾಣಾವಧಿಯಲ್ಲಿ ತಂಗುದಾಣವಾಗಿ ಬಳಸಿಕೊಳ್ಳಲು ಸಹ ಬಳಸಲಾಗುತ್ತಿತ್ತು. ಈ ನಿಟ್ಟಿನಲ್ಲಿ ಇಲ್ಲೊಂದು ಸರೈ ಅಥವಾ ಪ್ರವಾಸಿಗರ ವಿಶ್ರಾಂತಿ ಗೃಹವನ್ನು ನಿರ್ಮಿಸಲಾಗಿದೆ.

ಈ ಮಸೀದಿಯಲ್ಲಿ ಐದು ಕಮಾನುಗಳು, ಗೋಡೆಯ ಅಲಂಕಾರ ಪಟ್ಟಿಗಳು ಮತ್ತು ಪ್ಯಾರಾಪೀಟ್, ಎರಡು ಮಿನಾರುಗಳನ್ನು ಮತ್ತು ಪ್ರಾರ್ಥನಾ ಸಭಾಂಗಣವನ್ನು ಹೊಂದಿದೆ.ಇಲ್ಲಿನ ಪ್ಯಾರಾಪೀಟ್ ಮೊಗಸಾಲೆಗಳ ಮೂಲಕ ಹಾದು ಹೋಗುತ್ತದೆ. ಇದು ಹೊರಚಾಚಿಕೊಂಡಿರುವ ಹನ್ನೆರಡು ವಿಭಾಗಗಳನ್ನು ಒಳಗೊಂಡಿದೆ. ಪ್ರಾರ್ಥನಾ ಸಭಾಂಗಣವು ಎತ್ತರಕ್ಕೆ ನಿಂತಿರುವ ವೇದಿಕೆಯ ಮೇಲೆ ನಿರ್ಮಾಣಗೊಂಡಿದೆ. ಪ್ರಾರ್ಥನೆ ಸಲ್ಲಿಸುವ ಮೊದಲು ಕೈಕಾಲು ಶುಚಿ ಮಾಡಬೇಕಾದರೆ ಮಸೀದಿಯ ಕೆಳಭಾಗದಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ.

One Way
Return
From (Departure City)
To (Destination City)
Depart On
06 Aug,Thu
Return On
07 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Aug,Thu
Check Out
07 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Aug,Thu
Return On
07 Aug,Fri