ಧೋಲ - ರಿ- ಧನಿ ಎಂಬುದು ಹೈದರಬಾದಿನಲ್ಲಿರುವ ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯ ಒಂದು ಹಳ್ಳಿಯಾಗಿದೆ. ಈ ಹಳ್ಳಿಯು ನಗರದ ಜಂಜಡಗಳಿಂದ ದೂರವುಳಿದು ವಾರಾಂತ್ಯವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಈ ಸ್ಥಳವು ಸಿಕಂದರಬಾದಿನಿಂದ ಕೇವಲ 11 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಥೀಮ್ ಉಪಾಹರಗೃಹವು ತುಂಬ ಪ್ರಸಿದ್ಧಿಯನ್ನು ಪಡೆದಿದೆ. ಭವ್ಯವಾದ ಮುಖ್ಯದ್ವಾರದಲ್ಲಿ ಹಾದು ನೀವು ಈ ಊರಿಗೆ ಪ್ರವೇಶಿಸಿದ ಕೂಡಲೆ ನಿಮ್ಮಲ್ಲಿ ಒಂದು ಬಗೆಯ ಅದ್ದೂರಿತನ ಅಥವಾ ರಾಜತ್ವದ ಭಾವವುಂಟಾಗುತ್ತದೆ. ಸಂಜೆಯ ಹೊತ್ತಿನಲ್ಲಿ ಈ ಸ್ಥಳದಲ್ಲಿ ಸರಿಸುಮಾರು 2000 ಲಾಂಧ್ರಗಳನ್ನು ಹಚ್ಚಿ ದೀಪ ಬೆಳಗಲಾಗುತ್ತದೆ.
ಆಗ ಇಡೀ ಪ್ರದೇಶವೆ ಚಟುವಟಿಕೆಗಳಿಂದ ಕಲರವವನ್ನುಂಟು ಮಾಡುತ್ತಿರುತ್ತದೆ. ಅಲ್ಲದೆ ಇಲ್ಲಿ ಒಂಟೆ ಸವಾರಿ, ಕುದುರೆ ಸವಾರಿ, ಜನಪದ ಸಂಗೀತ ಮತ್ತು ನೃತ್ಯ, ತೊಗಲು ಗೊಂಬೆಯಾಟ, ಮಳೆಯ ನೃತ್ಯ ಮತ್ತು ದೋಣಿ ವಿಹಾರಗಳು ಲಭ್ಯವಿದೆ. ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ ಇಲ್ಲಿ ಯಾವುದಾದರು ತೆಲುಗು ಚಲನಚಿತ್ರಗಳನ್ನು ಚಿತ್ರೀಕರಣ ಮಾಡುತ್ತಿರುವುದನ್ನು ನೋಡಬಹುದು.


Click it and Unblock the Notifications