Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಚಿಲ್ಕೂರ್ ಬಾಲಾಜಿ ದೇವಾಲಯ

ಚಿಲ್ಕೂರ್ ಬಾಲಾಜಿ ದೇವಾಲಯ, ಹೈದರಾಬಾದ್

2

ಹೈದರಬಾದ್‍ನ ಚಿಲ್ಕೂರ್ ಬಾಲಾಜಿ ದೇವಾಲಯವು ವೀಸಾ ಬಾಲಾಜಿ ದೇವಾಲಯ ಅಥವಾ ವೀಸಾ ದೇವರು ಎಂದೆ ಪ್ರಸಿದ್ಧವಾಗಿದೆ. ಇದೊಂದು ಅತಿ ಪುರಾತನ ದೇವಾಲಯವಾಗಿದ್ದು, ಇಲ್ಲಿ ಬಾಲಾಜಿ ಮತ್ತು ಸಹಧರ್ಮಿಣಿಯರಾದ ಶ್ರೀ ದೇವಿ ಮತ್ತು ಭೂದೇವಿಯರನ್ನು ಪೂಜಿಸಲಾಗುತ್ತಿದೆ. ಇದೊಂದು ವಿಶೇಷ ದೇವಾಲಯವಾಗಿದ್ದು ಯಾವುದೇ ಕಾಣಿಕೆ ಅಥವಾ ದಾನವನ್ನು ಬಯಸದ ದೇವಾಲಯವಾಗಿ ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ. ಹಾಗಾಗಿ ಇಲ್ಲಿ ಯಾವುದೇ ’ಪತ್ರ ದಾನಗಳು’ ಅಥವಾ ಕಾಣಿಕೆ ಹುಂಡಿಗಳನ್ನು ನಾವು ಕಾಣಲಾಗುವುದಿಲ್ಲ. ಇಲ್ಲಿ ಶ್ರೀ ಸಾಮಾನ್ಯನಿಂದ ಗಣ್ಯವ್ಯಕ್ತಿಯವರೆಗೆ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ. 

ಹಾಗಾಗಿ ಗಣ್ಯ ವ್ಯಕ್ತಿಗಳಿಗೆ ಇಲ್ಲಿ ವಿಶೇಷ ಮರ್ಯಾದೆಯೇನು ನೀಡಲಾಗುವುದಿಲ್ಲ. ಅಲ್ಲದೆ ಈ ದೇವಾಲಯವು ರಾಜ್ಯ ಅಥವಾ ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಿಲ್ಲ. ಈ ದೇವಾಲಯದ ವಾಸ್ತು ಶಿಲ್ಪವನ್ನು ಪರಿಶೀಲಿಸಿದ ನಂತರ ಇದು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ. ಈ ದೇವಾಲಯವು ಉಸ್ಮಾನ್ ಸಾಗರ್ ಕೆರೆಯ ದಂಡೆಯ ಮೇಲೆ ಸುಂದರವಾಗಿ ತಲೆ ಎತ್ತಿದೆ. ಇದು ಮೆಹೆಡಿಪಟ್ಟಣಂನಿಂದ 33 ಕಿ.ಮೀ ದೂರದಲ್ಲಿದೆ. ತನ್ನ ಪ್ರತ್ಯೇಕ ಶೈಲಿಯಿಂದಾಗಿ ಈ ದೇವಾಲಯವು ಪ್ರತಿ ವರ್ಷವು ಸಹಸ್ರಾರು ಮಂದಿಯನ್ನು ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu