Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಬಿರ್ಲಾ ತಾರಾಲಯ

ಬಿರ್ಲಾ ತಾರಾಲಯ, ಹೈದರಾಬಾದ್

1

ಹೈದರಬಾದಿನಲ್ಲಿರುವ ಬಿರ್ಲಾ ತಾರಾಲಯವು ದೇಶದ ಮೊಟ್ಟ ಮೊದಲ ತಾರಾಲಯ ಎಂಬ ಕೀರ್ತಿಗೆ ಭಾಜನವಾಗಿದ್ದು, ರಾಷ್ಟ್ರವ್ಯಾಪಿಯಾಗಿ ಖಗೋಳ ಆಸಕ್ತರ ಗಮನವನ್ನು ಸೆಳೆಯುತ್ತಿದೆ. ಈ ತಾರಾಲಯವು  ಎನ್. ಟಿ. ರಾಮರಾವ್‍ರವರಿಂದ ಉದ್ಘಾಟನೆಗೊಂಡಿತು. ನೀವು ಮಕ್ಕಳೊಂದಿಗೆ ಹೈದರಬಾದಿಗೆ ಬಂದಿದ್ದಾದಲ್ಲಿ  ತಪ್ಪದೆ ಇಲ್ಲಿಗೆ ಭೇಟಿಕೊಡಬೇಕು. ಇದು ಅತಿಹೆಚ್ಚು ಭೇಟಿಕೊಡಲ್ಪಡುವ ವೈಙ್ಞಾನಿಕ ಕೇಂದ್ರವೆಂಬ ಕೀರ್ತಿಗೆ ಸಹ ಪಾತ್ರವಾಗಿದೆ. ಈ ತಾರಾಲಯದ ಒಳಗೆ ನೀವು ವಿಶ್ವದ ಜನನ ಅನೇಕ ನಿಗೂಢ ರಹಸ್ಯಗಳ ಕುರಿತು ಅರಿವು ಪಡೆಯುವಿರಿ.

ಈ ತಾರಾಲಯವು ಹೋಲಿಕೆಗೆ ನಿಲುಕದ ಅನುಭವವನ್ನು ನಿಮಗೆ ಒದಗಿಸುತ್ತದೆ. ಆಧುನಿಕ ತಂತ್ರಙ್ಞಾನವು ನಿಮಗೆ ಇಲ್ಲಿ ವಿಸ್ಮಯಗೊಳಿಸುವ ವಿಶ್ವದ ದೃಶ್ಯವೈಭವವನ್ನೆ ಕಣ್ಮುಂದೆ ತೋರಿಸುತ್ತದೆ.  ಈ ತಾರಾಲಯವು ಆಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಹೊಸ ಉಪಕರಣಗಳ ಕುರಿತಾಗಿ ತಿಳಿಯಲು ಸಹ ನೀವು ನಿಮ್ಮ ಕುಟುಂಬದೊಂದಿಗೆ ಇಲ್ಲಿಗೆ ಭೇಟಿ ಕೊಡಬಹುದು. ಒಟ್ಟಾರೆಯಾಗಿ ಇಲ್ಲಿಗೆ ಭೇಟಿ ಕೊಡುವ ಅನುಭವವು ನಿಮಗೆ ಅನಂತ ವಿಶ್ವದ ಪ್ರಯಾಣದ  ರೋಮಾಂಚನವನ್ನು ಮತ್ತು ಮನೋರಂಜನೆಯನ್ನು ಒದಗಿಸುತ್ತದೆ. ಹಾಗಾಗಿ ಬಿರ್ಲಾ ತಾರಾಲಯವು ಮಾಹಿತಿಗೆ ಮತ್ತು ಮನೋರಂಜನೆಗೆ ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun