Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಆಕರ್ಷಣೆಗಳು » ಕಳಸಿ

ಕಳಸಿ, ಹೊನ್ನೆಮರುಡು

0

ಹೊನ್ನೇಮರಡುವಿನಲ್ಲಿರುವ ಇನ್ನೊಂದು ಪ್ರಮುಖ ಸ್ಥಳ ಕಳಸಿ ಪಟ್ಟಣ. ಇಲ್ಲಿರುವ ಎರಡು ಶಿವ ದೇವಾಲಯವಾದ ನೀಲಕಂಠೇಶ್ವರ ದೇವಾಲಯ ಹಾಗೂ ಭಗವಾನ್ ಮಲ್ಲಿಕಾರ್ಜುನ ದೇವಾಲಯದಿಂದಾಗಿ ಈ ಪಟ್ಟಣವು ಹೆಸರುವಾಸಿಯಾಗಿದೆ. ಈ ಪಟ್ಟಣವು ಸಾಗರ ತಾಲೂಕಿನಿಂದ 8  ಕೀ. ಮಿ ದೂರದಲ್ಲಿದ್ದು ಸೊರಬ ಮಾರ್ಗದ ಮೂಲಕ ಜೋಗ್ ಜಲಪಾತಕ್ಕೆ ಸಂಪರ್ಕ ಹೊಂದಿದೆ. 12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಎರಡೂ ದೇವಾಲಯಗಳು ಹೊಯ್ಸಳ ವಾಸ್ತು ಶಿಲ್ಪವನ್ನು ಪಾಲಿಸುತ್ತಿದ್ದ ತಂದೆ-ಮಗ, ಜನಕ ಹಾಗೂ ಡಕ್ಕಣ(ದಕ್ಕಣ್ಣ) ರಿಂದ ನಿರ್ಮಿಸಲ್ಪಟ್ಟಿದೆ.

ಈ ಎರಡು ದೇವಾಲಯಗಳಲ್ಲಿ ದೊಡ್ಡದಾದ ಮಲ್ಲಿಕಾರ್ಜುನ ದೇವಾಲಯವು ಗರ್ಭಗೃಹ, ರಂಗಮಂಟಪ, ಬಸವಮಂಟಪಗಳನ್ನು ಹೊಂದಿದೆ. ಪ್ರವಾಸಿಗರು ಮೂರು ಬೇರೆ ಬೇರೆ ದಿಕ್ಕುಗಳನ್ನು ಹೊಂದಿರುವ ಮೂರು ಮುಖ್ಯ ದ್ವಾರಗಳಿಂದ ಈ ದೇವಾಲಯವನ್ನು ಪ್ರವೇಶಿಸಬಹುದು. ನೀಲಕಂಠೇಶ್ವರ ದೇವಾಲಯದಿಂದ 30 ಅಡಿ ದೂರದಲ್ಲಿ ಮಲ್ಲಿಕಾರ್ಜುನ ದೇವಾಲಯವು ಸ್ಥಾಪಿತವಾಗಿದ್ದು ಅದೇ ರೀತಿಯ ನಕ್ಷತ್ರ ಆಕಾರದ ಛಾವಣಿಯನ್ನು ಹೊಂದಿದೆ. ನೀಲಕಂಠೇಶ್ವರ ದೇವಾಲಯದ ಗರ್ಭಗೃಹದ ಮೇಲೆ ಗೋಪುರವನ್ನು ಹೊಂದಿದೆ. ಪೂಜೆಯ ಸಮಯದಲ್ಲಿ, ಪ್ರವಾಸಿಗರು ದೇವಿ ಭುವನೇಶ್ವರಿ ಹಾಗೂ ಹೊಯ್ಸಳ ಪ್ರತಿಮೆಯನ್ನು ದರ್ಶನ ಮಾಡಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed