Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಆಕರ್ಷಣೆಗಳು » ಕೆಳದಿ

ಕೆಳದಿ, ಹೊನ್ನೆಮರುಡು

0

ದೇವಾಲಯಗಳ ನಗರ ಎನಿಸಿಕೊಂಡಿರುವ ಕೆಳದಿ, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಹತ್ತಿರದಲ್ಲಿದೆ. ಈ ಸ್ಥಳವು ಇಲ್ಲಿನ ವಸ್ತು ಸಂಗ್ರಹಾಲಯ ಹಾಗೂ ಪುರಾತನವಾದ ಶಿವ ದೇವಾಲಯದಿಂದಾಗಿ ಪ್ರವಾಸಿಗರ ದೃಷ್ಟಿಯಲ್ಲಿ ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ. ಉತ್ತರ ಕರ್ನಾಟಕ ಪ್ರದೇಶಗಳಿಗೆ ಪ್ರವಾಸ ಮಾಡಲು ಹೊರಟರೆ ಕೆಳದಿಗೆ ಭೇಟಿ ನೀಡಲೇ ಬೇಕು. ಇದು ಪ್ರವಾಸಿಗರ ಪ್ರಯಾಣವನ್ನು ಇನ್ನಷ್ಟು ಪರಿಪೂರ್ಣವನ್ನಾಗಿ ಮಾಡುವುದಲ್ಲದೇ ಪ್ರಾಕೃತಿಕ ಸೌಂದರ್ಯದ ಅನುಭವವನ್ನು ನೀಡುವುದರ ಜೊತೆಗೆ ಧಾರ್ಮಿಕ ಸ್ಥಳವಾದ ಇಲ್ಲಿ ಪ್ರಾರ್ಥನೆಗೆ ಸಲ್ಲಿಸುವುದಕ್ಕೆ ಅವಕಾಶ ಮಾಡಿ ಕೊಡುತ್ತದೆ.

ಕೆಳದಿಯಲ್ಲಿರುವ ಪ್ರಸಿದ್ಧವಾದ  ಮೂರು ದೇವಾಲಯಗಳೆಂದರೆ, ವೀರಭದ್ರ, ಪಾರ್ವತಿ ಹಾಗೂ ರಾಮೇಶ್ವರ. ಈ ದೇವಾಲಯಗಳ ವಿಶೇಷತೆಯೆಂದರೆ ಇಲ್ಲಿನ ದೇವಾಲಯಗಳು ಭೇಟಿ ನೀಡುವ ಪ್ರವಾಸಿಗರನ್ನು ಹಿಂದಿನ ಲೋಕಕ್ಕೆ ಕೊಂಡೊಯ್ಯುತ್ತವೆ. ಕೆಳದಿಯ ನಾಯಕರು ಹಾಗೂ ಇಲ್ಲಿ ಆಳ್ವಿಕೆಯನ್ನು ನಡೆಸಿದ ಇತರ ರಾಜವಂಶಗಳ ಬಗ್ಗೆ ಒಂದೊಂದು ದೇವಾಲಯಗಳೂ ಪುರಾವೆಗಳನ್ನೊದಗಿಸುತ್ತವೆ. ಈ  ಮೂರು ದೇವಾಲಯಗಳು ದ್ರಾವಿಡ ಮತ್ತು ಹೊಯ್ಸಳ ವಾಸ್ತುಶಿಲ್ಪದ  ಶೈಲಿಗಳನ್ನು ಬಿಂಬಿಸುತ್ತವೆ.

ಕೆಳದಿ ವಸ್ತು ಸಂಗ್ರಹಾಲಯವು ನೋಡಲೇ ಬೇಕಾದ ಸ್ಥಳ. ಏಕೆಂದರೆ ಇಲ್ಲಿ ಇವತ್ತಿಗೂ ಕೆಳದಿಯನ್ನು ಆಳುತ್ತಿದ್ದ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ಬರೆಯಲಾದ ಕೆಲವು ಹಳೆಯ ಹಸ್ತಪ್ರತಿಗಳನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ  ಈ ಮ್ಯೂಸಿಯಂನಲ್ಲಿ ಅತ್ಯಂತ ಮಹತ್ವವಾದ, ಐತಿಹಾಸಿಕವಾದ, ನಾಯಕರ ಅವಧಿಗೆ ಸೇರಿದ ಶಾಸನಗಳನ್ನು, ನಾಣ್ಯಗಳು, ತಾಮ್ರ ಮತ್ತು ತಾಳೆ ಎಲೆ / ಗರಿಗಳಂತಹ  ಪ್ರಮುಖ ಸಂಗ್ರಹಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed