ಹಿಸಾರ್ ನಗರದಲ್ಲಿರುವ ಫಿರೋಜ್ ಷಾ ಅರಮನೆ ಕಾಂಪ್ಲೆಕ್ಸನ್ನು ಕ್ರಿ.ಶ. 1354ರಲ್ಲಿ ಫಿರೂಜ್ ಷಾ ತುಘಲಕ್ ಕಟ್ಟಿಸಿದ. ಅರಮನೆ ಆವರಣದಲ್ಲಿ ಲಾತ್ ಕಿ ಮಸ್ಜಿದ್ ಎಂಬ ಮಸೀದಿಯಿದೆ. ಇಲ್ಲಿ 20 ಅಡಿ ಎತ್ತರದ ಮರಳಿನ ಕಂಬವನ್ನು ನಿರ್ಮಿಸಲಾಗಿದೆ.
ಕಾಂಪ್ಲೆಕ್ಸ್ ನ ಕೆಳ ಅಂತಸ್ತಿನಲ್ಲಿ ಅಪಾರ್ಟ್ ಮೆಂಟ್ ಮತ್ತು ದಿವಾನ್-ಇ-ಆಲಂ ಇದೆ. ಹತ್ತಿರದಲ್ಲಿ ಗುಜರಿ ಮಹಲ್ ಎಂಬ ಹೆಸರಿನ ಮತ್ತೊಂದು ಅರಮನೆಯಿದೆ. ಇದನ್ನು ಫಿರೋಜ್ ಷಾ ತನ್ನ ಹೆಂಡತಿ ಗುಜರಿಗಾಗಿ ನಿರ್ಮಿಸಿದ್ದ. ತನ್ನ ಜೊತೆ ದೆಹಲಿಗೂ ಬರುವಂತೆ ಆಕೆಯನ್ನು ಫಿರೋಜ್ ಷಾ ಒತ್ತಾಯಿಸಿದ್ದ, ಆದರೆ ಆಕೆ ನಿರಾಕರಿಸಿದಳು. 1356ರಲ್ಲಿ ಗುಜರಿ ಮಹಲ್ ಅರಮನೆ ನಿರ್ಮಾಣ ಮುಕ್ತಾಯವಾಯಿತು. ಬೃಹತ್ ಆಯತಾಕಾರದ ವೇದಿಕೆಯ ಮೇಲೆ ಅರಮನೆಯನ್ನು ಕಟ್ಟಿಸಲಾಗಿದೆ. ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಡಿಯಾ ಈ ಅರಮನೆಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.


Click it and Unblock the Notifications