ಈ ಬರ್ಸಿ ಗೇಟ್ ಹಿಸಾರ್ ನ ಪೂರ್ವ ಭಾಗದಲ್ಲಿ 26 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ನಗರದಲ್ಲಿರುವ ಐದು ಪ್ರಮುಖ ಪ್ರವೇಶ ದ್ವಾರದಲ್ಲಿ ಬಾರ್ಸಿ ಗೇಟ್ ಇದೆ. ನಗರದಲ್ಲಿರುವ ಪ್ರವೇಶ ದ್ವಾರಗಳಲ್ಲೊಂದು. ಉಳಿದ ದ್ವಾರಗಳು ದೆಹಲಿ ಗೇಟ್, ಹಿಸಾರ್ ಗೇಟ್, ಗೋಸಿಯನ್ ಗೇಟ್ ಮತ್ತು ಉಮ್ರಾ ಗೇಟ್.
ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆಯಲ್ಲಿರುವ ಹಂಸಿ ಕೋಟೆಯ ಹೊರಭಾಗದ ರಕ್ಷಣಾ ಗೋಡೆಯ ಬಳಿ ಸಾಮ್ರಾಜ್ಯಾಶಾಹಿ ಕಥೆಯನ್ನು ಸಾರುವ ಬರ್ಸಿ ಗೇಟ್ ಇದೆ. ಹಿಂದಿನ ಕಾಲದಲ್ಲಿ ಪುರಾತನ ಹಂಸಿ ಕೋಟೆಯ ಪ್ರವೇಶದ್ವಾರವಾಗಿತ್ತು ಈ ಗೇಟ್. ಕ್ರಿ.ಶ.1304-1305ರಲ್ಲಿ ಕಟ್ಟಲಾಗಿದೆ ಎಂದು ಸಾರುವ ಪರ್ಶಿಯನ್ ಲಿಪಿಯನ್ನು ಗೇಟಿನ ಬಾಗಿಲ ಮೇಲೆ ಕೆತ್ತಲಾಗಿದೆ. ರಜಪೂತರ ದೊರೆ ಪೃಥ್ವಿರಾಜ್ ಆಡಳಿತದಲ್ಲಿ ಸಾಮಂತ ರಾಜನಾಗಿದ್ದ ಕಿಲ್ಹಾರಾ ಎಂಬಾತ ಈ ಬರ್ಸಿ ಗೇಟ್ ಕಟ್ಟಿಸಿದ ಎಂಬ ನಂಬಲಾಗಿದೆ.
ಈ ಗೇಟ್ ಹಲವಾರು ಬಾರಿ ಹಾನಿಗೊಳಗಾಗಿದೆ ಮತ್ತು ರಿಪೇರಿಗೊಳಪಟ್ಟಿದೆ. 1799ರಲ್ಲಿ ಹಂಸಿಯನ್ನು ರಾಜಧಾನಿ ಮಾಡಿದ್ದ ಜಾರ್ಜ್ ಥಾಮಸ್ ಇದನ್ನು ಮೊದಲ ಬಾರಿಗೆ ರಿಪೇರಿ ಮಾಡಿಸಿದ. 1801ರ ಡಿಸೆಂಬರ್ ನಲ್ಲಿ ಬ್ರಿಟಿಷರು ಮತ್ತು ಮರಾಠರ ನಡುವೆ ನಡೆದ ಯುದ್ಧದಲ್ಲಿಯೂ ಇದು ಹಾನಿಗೊಳಗಾಗಿತ್ತು. 2001ರಲ್ಲಿ ಇದನ್ನು ಕೊನೆಯ ಬಾರಿಗೆ ದುರಸ್ತಿ ಮಾಡಲಾಯಿತು.


Click it and Unblock the Notifications