ರಾಜ್ರಪ್ಪಾ, ಹಜಾರಿಬಾಗ್ ನ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಛಿನ್ನಮಸ್ತಾ ದೇವಸ್ಥಾನವಿರುವ ಜಾರ್ಖಂಡ್ ನಲ್ಲಿ ಎನ್ ಎಹ್ 23ಯಲ್ಲಿ ನೆಲೆಯಾಗಿದೆ. ಇದೊಂದು ಶಕ್ತಿಪೀಠವಾಗಿದ್ದು ಇಲ್ಲಿ ರತಿ ಮತ್ತು ಕಾಮದೇವರ ದೇಹಗಳ ಕತ್ತಿಲ್ಲದ ದೇವತೆಯ ಪ್ರತಿಮೆ ನಿಂತಿದೆ. ಈ ಹಳೆಯ ದೇವಾಲಯ ತಾಂತ್ರಿಕ ಶೈಲಿಗೆ ಪ್ರಸಿದ್ಧವಾಗಿದೆ. ಕಾಳಿ ದೇವಾಲಯದಲ್ಲಿ ಪ್ರಾಣಿ ಬಲಿಯನ್ನು ಕೈಗೊಳ್ಳಲಾಗುತ್ತದೆ.
ರಾಜ್ರಪ್ಪಾ, ಬುಡಕಟ್ಟು ಜನಾಂಗದ ಅದರಲ್ಲೂ ವಿಶೇಷವಾಗಿ ಜಾರ್ಖಂಡ್ ನ ಸಂತಾಲ್ ಬುಡಕಟ್ಟು ಜನರ ಒಂದು ಪವಿತ್ರ ಸ್ಥಳವಾಗಿದೆ. ಅವರು ಹೆಚ್ಚಾಗಿ ಡಿಸೆಂಬರ್ ತಿಂಗಳಲ್ಲಿ ಯಾತ್ರೆಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇದು ಹಿಂದೂಗಳಿಗೆ ಒಂದು ಮುಖ್ಯ ಯಾತ್ರಾಸ್ಥಳವಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಜನರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ.
ರಾಜ್ರಪ್ಪಾ ಒಂದು ಜನಪ್ರಿಯ ಪ್ರವಾಸಿ ತಾಣವೂ ಕೂಡ ಆಗಿದೆ. ರಾಜ್ರಪ್ಪಾ ಜಲಪಾತಗಳು ಒಂದು ಪ್ರವಾಸಿ ತಾಣವಾಗಿದೆ. ದಾಮೋದರ್ ನದಿಯ ಜೊತೆಗೆ ಭೀರಾ ನದಿ 30 ಅಡಿ ಎತ್ತರದಲ್ಲಿ ಜಲಪಾತವಾಗಿ ರೂಪಗೊಳ್ಳುತ್ತದೆ. ಜನರು ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ ಮತ್ತು ಭವ್ಯವಾದ ಬಂಡೆಯ ಸ್ತರಗಳು ಮತ್ತು ದೋಣಿ ಸವಾರಿ ಕೂಡ ಮಾಡಬಹುದು.


Click it and Unblock the Notifications