Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಭಾಯಿ ಧರಮ್ ಸಿಂಗ್ ಗುರುದ್ವಾರ

ಭಾಯಿ ಧರಮ್ ಸಿಂಗ್ ಗುರುದ್ವಾರ, ಹಸ್ತಿನಾಪುರ

1

ಭಾಯಿ ದರಮಸಿಂಗರ ನೆನೆಪಿನ ದ್ಯೋತಕವಾಗಿ ಭಾಯಿ ದರಮ್ ಸಿಂಗ್ ಗುರುದ್ವಾರವನ್ನು ಸೈಫಾಪುರದಲ್ಲಿ ಸ್ಥಾಪಿಸಲಾಗಿದೆ. ಇದು ಹಸ್ತಿನಾಪುರದಿಂದ 2.5 ಕೀ.ಮೀ ದೂರದಲ್ಲಿದೆ. ಸಿಖ್ ಗುರವಾದ ಪೂಜ್ಯನೀಯ ಗುರು ಗೋವಿಂದರು ಪ್ರೀತಿಸುತ್ತಿದ್ದ ಅವರ ಪ್ರಮುಖ ಐದು ಅನುಯಾಯಿಗಳಲ್ಲಿ ಇವರು ಒಬ್ಬರು. ಆಥವಾ ಗುರು ಗೋವಿಂದರ ಪಂಚ ಪ್ಯಾರೇಗಳಲ್ಲಿ ಭಾಯಿ ದರಮ್ ಸಿಂಗರಿಗೆ ಪ್ರಮುಖ ಸ್ಥಾನ.

ಒಂದು ಸಲ ಗುರುಗಳಾದ ಗುರು ಗೋವಿಂದರು “ನಾನು ಮಾಡುತ್ತಿರುವ ಹೋರಾಟದಲ್ಲಿ ನನಗೆ ಸಹಾಯ ಮಾಡಲು ಮತ್ತು ಸ್ವಯಂ ತ್ಯಾಗ ಮತ್ತು ಬಲಿದಾನ ಮಾಡಲು ನಿಮ್ಮಲ್ಲಿ ಯಾರಾದರೂ ಇದ್ದೀರಾ?” ಎಂದು  ತಮ್ಮ ಅನುಯಾಯಿಗಳಿಗೆ ಕೇಳಿದರಂತೆ. ಆಗ ಅಷ್ಟು ಜನರ ಅನುಯಾಯಿಗಳಲ್ಲಿ ಮೊದಲು ಐದು ಜನರ ಗುಪೊಂದು “ನಿಮ್ಮ  ಹೋರಾಟಕ್ಕಾಗಿ ನಾವು ತ್ಯಾಗ ಮಾಡಲು ಸಿದ್ಧರಾಗಿದ್ದೇವೆ” ಎಂದು ಹೇಳಿತು. ಮುಂದೆ ಈ ಗುಂಪನ್ನು ಅನುಕರಿಸಿ ಸಾವಿರಾರು ಸಿಖ್ಖರು ಈ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಆ ಮೊದಲ ಐದು ಜನ ಸದಸ್ಯರಲ್ಲಿ ಭಾಯಿ ದರಮ್ ಸಿಂಗರು ಒಬ್ಬರಾಗಿದ್ದರು.

ಭಾಯಿ ದರಮ್ ಸಿಂಗರು ಮೂಲತಃ ಜತ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಮೂಲ ಹೆಸರು ಧರಮ್ ದಾಸ. ಇವರು 1666 ರಲ್ಲಿ ಹಸ್ತಿನಾಪುರದ ಸಮೀಪ ಇರುವ ಕರಮಚಂದಪುರದ ಸೈಫಾಪುರ ಎಂಬ ಹಳ್ಳಿಯಲ್ಲಿ ಜನಿಸಿದರು. ಭಾಯಿ ಸಂತ ಮತ್ತು ಮಾಯಿ ಸಾಭೋ ಇವರ ತಂದೆ ತಾಯಿಗಳು.

ಸಂತರು ಉನ್ನತ ಮಟ್ಟದ ಧಾರ್ಮಿಕ ವ್ಯಕ್ತಿಯಾಗಿದ್ದರು. ಅವರು ಕೇವಲ 13 ವರ್ಷದವರಿದ್ದಾಗ ಅವರಿಗೆ ಸಿಖ ಧರ್ಮದ ಪರಿಚಯವಾಯಿತು. ಇವರು ತಮ್ಮ ಜೀವನದ ಬಹು ಭಾಗವನ್ನು ಜ್ಞಾನದ ಅನ್ವೇಷಣೆಯಲ್ಲಿ ಕಳೆದರು. ತಮ್ಮ 42 ನೇ ವಯಸ್ಸಿನಲ್ಲಿ ಅಂದರೆ 1708 ರಲ್ಲಿ ಗುರುದ್ವಾರ ನಾಂದೇಡ್ ಸಾಹೀಬ್‍ನಲ್ಲಿ ವಿಧಿವಶರಾದರು. ಭಾಯಿ ದರಮ್ ಸಿಂಗ್ ಗುರುದ್ವಾರವು ಸಿಖ್ ಧರ್ಮಿಯರ ಅತ್ಯಂತ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun