ಪಾತಾಳೇಶ್ವರ ದೇವಾಲಯವು ಹಾಜಿಪುರದ ಬೆರಗುಗೊಳಿಸುವ ಅದ್ಬುತಗಳಲ್ಲಿ ಒಂದಾಗಿದೆ. ದೇವತೆಗಳ ದೇವನಾದ ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಜಡುವ ರಸ್ತೆಯಲ್ಲಿದೆ. ಈ ದೇವಾಲಯದ ಅಸ್ತಿತ್ವ ಪ್ರಾಚೀನ ಕಾಲದಿಂದಲೂ ಇದೆ. ಒಂದು ಹಂತದಲ್ಲಿ ಇಲ್ಲಿ ಶಿವ ಪ್ರತ್ಯಕ್ಷವಾದ ಮತ್ತು ಲಿಂಗರೂಪದಲ್ಲಿ ಶಾಶ್ವತವಾಗಿ ಇಲ್ಲಿ ನೆಲೆಸಲು ಪ್ರಾರಂಭಿಸಿದ ಎಂದು ಹೇಳಲಾಗುತ್ತದೆ. ಈ ದೇವಾಲಯ ಶಿವನ ಹೊಳೆಯುತ್ತಿರುವ ಮಾನವರೂಪಿ ಚಿತ್ರದ ಜೊತೆಗೆ ಲಿಂಗವನ್ನು ಕೂಡ ಹೊಂದಿದ್ದು ಭಕ್ತಾದಿಗಳು ಅಶೀರ್ವಾದಕ್ಕಾಗಿ ಇಲ್ಲಿ ಬಂದು ಆರಾಧಿಸುತ್ತಾರೆ. ಇಲ್ಲಿ ನಡೆಯುವ ಮಂತ್ರಗಳ ಘೋಷಣೆಯು ದೇವಾಲಯಕ್ಕೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ಶಿವರಾತ್ರಿಯ ಸಂದರ್ಭದಲ್ಲಿ ಪಾಪ ನಾಶಕ್ಕೆ ಅನೇಕ ಭಕ್ತರು ಇಲ್ಲಿ ಬಂದು ಪ್ರಾರ್ಥಿಸುತ್ತಾರೆ.


Click it and Unblock the Notifications