ಅಸ್ಸಾಂನಲ್ಲಿರುವ ಜನಪ್ರಿಯ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾನಸ ರಾಷ್ಟ್ರೀಯ ಉದ್ಯಾನವೂ ಒಂದು. ಇದೊಂದು ಯುನೆಸ್ಕೊದಿಂದ ಮಾನ್ಯತೆ ಪಡೆದ ಪ್ರಾಕೃತಿಕ ವಿಶ್ವ ತಾಣ, ಹುಲಿ ಮೀಸಲು ಪ್ರದೇಶ, ಬಯೋಸ್ಫಿಯರ್ ಮತ್ತು ಆನೆ ಮೀಸಲು ಪ್ರದೇಶ. ಹಿಮಾಲಯ ಪರ್ವತ ಶ್ರೇಣಿಗಳ ಬುಡದಲ್ಲಿ ನೆಲೆಸಿರುವ ಈ ಉದ್ಯಾನವು ಭೂತಾನ್ ವರೆಗೂ ಹರಡಿದೆ. ಅಲ್ಲಿ ಇದನ್ನು ರಾಯಲ್ ಮಾನಸ ರಾಷ್ಟ್ರೀಯ ಉದ್ಯಾನ ಎನ್ನಲಾಗುತ್ತದೆ.
ಈ ಉದ್ಯಾನವನವು ಕೆಲವು ವಿನಾಶದಂಚಿನಲ್ಲಿರುವ ಜೀವಿಗಳಾದ ಹಿಸ್ಪಿಡ್ ಮೊಲ, ಅಸ್ಸಾಂ ರೂಫ್ಡ್ ಟರ್ಟಲ್, ಪಿಗ್ಮಿ ಹಾಗ್ ಮತ್ತು ಗೋಲ್ಡನ್ ಲಂಗೂರ್ ಗಳಿಗೆ ಪ್ರಮುಖ ನೆಲೆಯಾಗಿದೆ. ಇಲ್ಲಿ ಅಪರೂಪವೆನ್ನಲಾದ ವೈಲ್ಡ್ ವಾಟರ್ ಬಫಾಲ್ಲೊಗಳನ್ನೂ ಕಾಣಬಹುದು. ಒಟ್ಟಾರೆಯಾಗಿ ಇಲ್ಲಿ 55 ಬಗೆಯ ಸಸ್ತನಿಗಳು, 380 ಬಗೆಯ ಪಕ್ಷಿಗಳು, 50 ಬಗೆಯ ಸರಿಸೃಪಗಳು ಹಾಗು 3 ಬಗೆಯ ಉಭಯವಾಸಿಗಳನ್ನು ಕಾಣಬಹುದು. ಪ್ರವಾಸಿಗರು ಇಲ್ಲಿ ಜಂಗಲ್ ಸಫಾರಿ ಹಾಗು ನೈಸರ್ಗಿಕ ಚಾರಣದ ಅನುಭವವನ್ನು ಪಡೆಯಬಹುದು. ಈ ರಾಷ್ಟ್ರೀಯ ಉದ್ಯಾನವು ಕೊಕ್ರಝಾರ್, ಚಿರಾಂಗ್, ಬಕ್ಸಾ, ಉದಲ್ಗುರಿ ಮತ್ತು ದರ್ರಾಂಗ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿಒಗೆ ಭೇಟಿ ನೀಡಲು ಸೂಕ್ತವಾಗಿರುತ್ತದೆ.


Click it and Unblock the Notifications