ಈ ನಾಮದೇವ್ ದರ್ಬಾರ್ ಎಂಬುದು ಘೋಮನ್ ಎಂಬಲ್ಲಿದೆ. ಇದು ಹರಗೊಬಿಂದಪುರದಿಂದ 15 ಕಿ.ಮೀ. ದೂರದಲ್ಲಿದೆ. ಈ ಧಾರ್ಮಿಕ ಕೇಂದ್ರ ನಾಮದೇವ್ ರೊಂದಿಗೆ ಸೇರಿಕೊಂಡಿದೆ, ಏನೆಂದರೆ ಈ ಸ್ಥಳವನ್ನು ಸ್ಥಾಪಿಸಿದವರು ಇವರೇ. ಒಂದು ಜಾನಪದ ಕಥೆಯ ಪ್ರಕಾರ, ಗುರು ನಾಮದೇವ್ ರವರು ಇಲ್ಲಿ 17 ವರ್ಷ ತಪಸ್ಸು ಮಾಡಿದರೆಂದು ತಿಳಿದುಬರುತ್ತದೆ. ಗುರು ನಾಮದೇವ್ ರವರು ಇಲ್ಲಿ ಪ್ರಸಿದ್ಧಿ ಪಡೆದು ಪವಾಡಗಳನ್ನು ಮಾಡಿದ್ದಾರೆಂದು ಹೇಳುತ್ತಾರೆ. ಅವರ ಒಂದು ನಂಬಿಕೆಯ ಪ್ರಕಾರ, ಮದುವೆ ಒಂದು ಪವಿತ್ರ ಬಂಧನವಾಗಿದ್ದು ಅದನ್ನು ಮಾಡಿಕೊಂಡು ನಂತರ ಇಬ್ಬರೂ ಸತಿಪತಿಗಳು ಸೇರಿ ವಾಹೆಗುರುವಿನ ಪವಿತ್ರ ಭಕ್ತಿಯನ್ನು ಪಡೆಯಬಹುದು. ಈ ದರ್ಬಾರ್ ನಲ್ಲಿ ಪ್ರವಾಸಿಗರು ಹೇರಳವಾದ ಧಾರ್ಮಿಕ ಬರಹಗಳನ್ನು ನೋಡಬಹುದು. ಇದು 13 ನೇ ಶತಮಾನಕ್ಕೆ ಸೇರಿದುದು.


Click it and Unblock the Notifications