Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರುದಾಸ್ಪುರ್ » ಹವಾಮಾನ

ಗುರುದಾಸ್ಪುರ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ ವರಗೆ ಇಲ್ಲಿಗೆ ಭೇಟಿ ನೀಡಬಹುದು. ಚಳಿಗಾಲದಲ್ಲಿ ಈ ಜಾಗ ತುಂಬಾ ಸುಂದರವಾಗಿರುತ್ತದೆ.  ಹಾಗು ನಿಶಬ್ದ ಮತ್ತು ನಿರ್ಮಲ ವಾತಾವರಣ ಇರುತ್ತದೆ. ಆದ್ದರಿಂದ ಪ್ರವಾಸ ಕುತೂಹಲಕಾರಿಯಾಗಿರುತ್ತದೆ. ಈ ಸಮಯದಲ್ಲಿ ನಡೆಯುವ ಜಾತ್ರೆ, ಹಬ್ಬಗಳು ಇಲ್ಲಿಗೆ ಮೆರಗು ಕೊಡುತ್ತವೆ.

ಬೇಸಿಗೆಗಾಲ

ಏಪ್ರಿಲ್ ನಿಂದ ಜೂನ್ ವರಗೆ ಇರುತ್ತದೆ. ಈ ಕಾಲದಲ್ಲಿ 44 ಡಿಗ್ರೀ ತಾಪಮಾನ ಇರುತ್ತದೆ. ಹಾಗು ಧೂಳು ಸಹಿತ ಸುಂಟರಗಾಳಿ ಆಗಾಗ್ಗೆ ಈ ಕಾಲದಲ್ಲಿ ಬರುವುದುಂಟು.

ಮಳೆಗಾಲ

ಜುಲೈ ಯಿಂದ ಆಗಸ್ಟ್ ಕೊನೆಯ ತನಕ ಇರುತ್ತದೆ. ನಂತರ ಮಳೆಗಾಲದ ನಂತರದ (ಸೆಪ್ಟೆಂಬರ್ ನಿಂದ ಅಕ್ಟೋಬರ್)  ಋತು. ಈ ಕಾಲದಲ್ಲಿ ತಾಪಮಾನ ಗಣನೀಯವಾಗಿ ಇಳಿದು ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ.

ಚಳಿಗಾಲ

ನವೆಂಬರ್ ನಲ್ಲಿ ಆರಂಭವಾಗುವ ಚಳಿಗಾಲ ತಾಪಮಾನವನ್ನು 6 ಡಿಗ್ರೀ ಗೆ ಕೊಂಡೊಯ್ಯುವುದು. ಚಳಿಗಾಲ ಮಾರ್ಚ್ ತನಕ ಮುಂದುವರಿದು  ಜನವರಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ಇರುತ್ತದೆ. ಕೆಲವೊಮ್ಮೆ ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆ ಬೀಳುತ್ತದೆ.