ಈ ದೇವಸ್ಥಾನ ಒಂದು ಧಾರ್ಮಿಕ ಆಕರ್ಷಣೆಯ ಸ್ಥಳ. ಜಗತ್ತಿನಲ್ಲೇ ಮಲಗಿರುವ ಶಿವಲಿಂಗ ಇರುವುದು ಇದೊಂದೇ ಸ್ಥಳದಲ್ಲಿ. ಈ ದೇವಸ್ಥಾನ ಕಾಲನೂರ್ ಎಂಬ ಜಾಗದಲ್ಲಿದೆ. ಇದು ಗುರುದಾಸ್ಪುರದಿಂದ 23 ಕಿ.ಮೀ. ದೂರದಲ್ಲಿದೆ. ಇದರ ವಿಶೇಷವೆಂದರೆ ಯಾವ ಭಕ್ತನು ನಿರ್ಮಲ ಮನಸ್ಸಿನಿಂದ ಇಲ್ಲಿಗೆ ಬಂದು ಬೇಡುವನೋ ಅವನಿಗೆ ಶಿವ ನಿರಾಶೆಯನ್ನುಂಟು ಮಾಡುವುದಿಲ್ಲ. ಮಹಾ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ಶಿವನು ವಿಶಕಂಠನಾದದ್ದನ್ನು ಕಣ್ಣಾರೆ ಕಾಣಬಹುದು (ಶಿವನ ಕಂಠದಲ್ಲಿ ನೀಲಿ ಬಣ್ಣವನ್ನು ಕಾಣಬಹುದು). ಈ ಅದ್ಬುತವನ್ನು ಕಣ್ಣಾ ರೆ ಕಾಣಲು ಸಾವಿರಾರು ಭಕ್ತರು ಬರುತ್ತಾರೆ. ಈ ಸ್ಥಳವನ್ನು ತಲುಪಲು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳನ್ನು ಅವಲಂಬಿಸಬಹುದು.


Click it and Unblock the Notifications