ಬ್ರಿಟೀಷರ ಆಳ್ವಿಕೆ ಇಲ್ಲಿದ್ದ ಸಂದರ್ಭ ಅಂದರೆ 1902 ರಲ್ಲಿ ಸೇಂಟ್ ಮೇರಿಸ್ ಚರ್ಚ್ ನಿಮರ್ಮಾಣಗೊಂಡಿತು. ಗುಲ್‌ಮಾರ್ಗ್ ಗೆ ಅತ್ಯಂತ ಸಮೀಪದಲ್ಲಿಯೇ ಈ ಚರ್ಚ್ ನೆಲೆಸಿದೆ. ಬ್ರಿಟೀಷ್ ವಾಸ್ತುಶಿಲ್ಪದ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಇದು ಸೆಳೆಯುತ್ತದೆ. ಇಡೀ ರಾಜ್ಯಾದ್ಯಂತ ಇದು ನಿರ್ಮಾಣಗೊಂಡ ಸಂದರ್ಭದಲ್ಲೆ ಸಾಕಷ್ಟು ಚರ್ಚ್ ಗಳನ್ನು ನಿಮರ್ಮಿಸಲಾಯಿತು. ಅವುಗಳಲ್ಲಿ ಇದು ಪ್ರಮುಖವಾದುದಾಗಿದೆ. 110 ವರ್ಷ ಪುರಾತನವಾಗಿರುವ ಇದು ಭಾರತದಲ್ಲಿ ಬ್ರಿಟೀಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡ ಎನಿಸಿದೆ.
ಈ ಚರ್ಚ್ ಸುತ್ತಲೂ ಸಾಕಷ್ಟು ಗುಡಿಸಲು, ಹೋಟೆಲ್‌ಗಳಿವೆ. ಹಳೆಯ ವಾಸ್ತುಶಿಲ್ಪ ಮಾದರಿಯನ್ನೇ ಇವು ಉಳಿಸಿಕೊಂಡಿವೆ ಹಾಗೂ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಗಳೂ ಸಹ ಅದೇ ಮಾದರಿಯಲ್ಲಿ ನಿರ್ಮಾಣಗೊಂಡಿವೆ. ಪ್ರವಾಸಿಗರು ಇಲ್ಲಿ ವಾಸ್ತವ್ಯ ಹೂಡಲು ಸಹ ಇಷ್ಟ ಪಡುವುದು ಇದೇ ಕಾರಣಕ್ಕೆ. ಸ್ಥಳದ ಸೌಂದರ್ಯವನ್ನು ಸುತ್ತಲಿರುವ ಆಲ್‌ಪೈನ್ ಮರಗಳು ಹೆಚ್ಚಿಸಿವೆ. ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮರಗಳು ಕಾಣಸಿಗುತ್ತವೆ. ಚರ್ಚ್ ಸಮೀಪವೇ ಮಸೀದಿ, ದೇವಾಲಯ ಹಾಗೂ ಗುರುದ್ವಾರಗಳು ಕೂಡ ನಿರ್ಮಾಣಗೊಂಡಿವೆ.


Click it and Unblock the Notifications