ನೈಸರ್ಗಿಕ ಸೌಂದರ್ಯದಿಂದ ಅತ್ಯಂತ ಜನಪ್ರಿಯವಾಗಿರುವ ತಾಣ ಲೀನ್‌ಮಾರ್ಗ್. ಗುಲ್‌ಮಾರ್ಗ್ ದಿಂದ 10 ಕಿ.ಮೀ. ದೂರದಲ್ಲಿರುವ ಈ ತಾಣ ಸಮುದ್ರ ಮಟ್ಟದಿಂದ 8700 ಅಡಿ ಎತ್ತರದಲ್ಲಿದೆ. ಅತ್ಯಾಕರ್ಷಕ ಪೈನ್ ಮರಗಳ ದಟ್ಟಾರಣ್ಯದಿಂದ ಆವೃತ್ತವಾಗಿದೆ. ಹುಲ್ಲಿನಿಂದ ಆವೃತ್ತವಾಗಿರುವ ಭೂಮಿಯಿಂದಾಗಿ ಇದೊಂದು ಪ್ಯಾಂಪ್ ಹೂಡಲು ಹಾಗೂ ಕ್ರೀಡಾಚಟುವಟಿಕೆಗೆ ಹೇಳಿಮಾಡಿಸಿದ ತಾಣವಾಗಿದೆ. ಇದೊಂದು ಆಕರ್ಷಕ ಜಲಕ್ರೀಡೆಯ ತಾಣವೂ ಆಗಿದೆ. ಅಲ್ಲದೇ ಚಳಿಗಾಲದ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುವ ಸ್ಥಳವಾಗಿದೆ. ಈ ತಾಣ ತಲುಪುವ ಮಾರ್ಗವೂ ಆಕರ್ಷಕವಾಗಿದೆ. ನಿಂಗ್ಲಾ ನಾಲಾದಿಂದ ಸೇತುವೆ ಮಾರ್ಗದಲ್ಲಿ ಸಾಗಿ ತಲುಪಬೇಕು. ಈ ಪ್ರಯಾಣ ಮಾರ್ಗ ಬೇಗ ಹಾಗೂ ಆರಾಮದಾಯಕವಾಗಿದೆ. ಜತೆಗೆ ಆಕರ್ಷಕ ಚಿತ್ರಣಗಳು ಕಾಣಸಿಗುತ್ತವೆ.


Click it and Unblock the Notifications