ಗುಲ್ಮಾರ್ಗ್ ಸಮೀಪದಲ್ಲಿಯೇ ಕೊಕೇರ್ನಾಗ್ ಇದೆ. ಇದೊಂದು ಜನಪ್ರಿಯ ಪ್ರವಾಸಿ ತಾಣ. ಇದು ಸ್ಥಳೀಯ ಭಾಷೆಯಲ್ಲಿ 'ಕುಕೇರ್' ಅಂದರೆ ಹರಿವು ಹಾಗೂ ನಾಗ್ ಎಂದರೆ ಹಾವು ಎಂದು ಆಗುತ್ತದೆ. ಸಮುದ್ರ ಮಟ್ಟದಿಂದ ಇದರ ಎತ್ತರ 2000 ಮೀಟರ್. ಇಲ್ಲಿರುವ ತೊರೆ, ಉದ್ಯಾನ, ಮೀನುಕೊಳ ವೀಕ್ಷಿಸಲು ಎಲ್ಲೆಡೆಯಿಂದ ಜನ ಬರುತ್ತಾರೆ. ಕೊಕೇರ್ನಾಗ್ ನ ತೊರೆಯ ನೀರು ಔಷಧೀಯ ಗುಣ ಹೊಂದಿದೆ ಎಂದು ನಂಬಲಾಗುತ್ತದೆ. ಅಲ್ಲದೇ ಇದು ಹಸಿವು ಹಾಗೂ ಬಳಲಿಕೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ ಎಂದು ಜನ ನಂಬಿದ್ದಾರೆ. ಪಟ್ಟಣ ಹಾಗೂ ಹಳ್ಳಿಗಳ ಮಿಶ್ರಣ ಕೊಕೇರ್ನಾಗ್ ಆಗಿದೆ. ದಾಕ್‌ಸುಮ್, ಸಾಗಂ, ವಾಂಗಂ, ಹಂಗ್ಲಾಗುಂಡ್ ಹಾಗೂ ಜಲೇರ್ಗಮ್ ಇಲ್ಲಿನ ಮುಖ್ಯ ಪ್ರದೇಶಗಳು.


Click it and Unblock the Notifications