Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಖೀಲನ್ಮಾರ್ಗ್

ಖೀಲನ್ಮಾರ್ಗ್, ಗುಲ್ಮಾರ್ಗ್

2

ಗುಲ್‌ಮಾರ್ಗ್ ಬಸ್‌ ನಿಲ್ದಾಣದಿಂದ ಕೇವಲ 4 ಕಿ.ಮೀ. ದೂರದಲ್ಲಿದೆ ಖೀಲನ್ಮಾರ್ಗ್. ಕಣಿವೆಯ ಅಂಚಲ್ಲಿ ನಡೆದೇ ಸಾಗುವ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದು. ಎಲ್ಲಾ ದಿಕ್ಕುಗಳಲ್ಲಿಯೂ ಪರ್ವತಗಳಿಂದ ಈ ತಾಣ ಆವೃತ್ತವಾಗಿದೆ. ವರ್ಷವಿಡೀ ವನ್ಯ ಪುಷ್ಪಗಳಿಂದ ಈ ಪ್ರದೇಶ ಕಂಗೊಳಿಸುತ್ತಿರುತ್ತದೆ. ಪ್ರವಾಸಿಗರು ಇಲ್ಲಿ ಬಂದ ಸಂದರ್ಭದಲ್ಲಿ ಹಿಮಾಲಯದ ನಂಗಾ ಪರ್ಬತ್‌ನ ವಿಹಂಗಮ ನೋಟವನ್ನು ಸವಿಯಬಹುದು. ಇದಲ್ಲದೇ ಇನ್ನೆರಡು ಪ್ರಮುಖ ಪರ್ವತಗಳ ತಪ್ಪಲಾದ ನಾನ್‌ ಹಾಗೂ ಕುನ್‌ ಗಳನ್ನೂ ವೀಕ್ಷಿಸಬಹುದು. ಸಾಕಷ್ಟು ಆಕರ್ಷಕ ತಾಣಗಳು ಇದರ ಸುತ್ತಮುತ್ತ ಕಾಣಸಿಗುತ್ತವೆ.

ಖೀಲನ್ಮಾರ್ಗ್ ದ ಹೊರ ವಲಯದಲ್ಲಿ ಒಂದು ವೀಕ್ಷಣಾ ತಾಣ ಇದೆ. ಇದು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾರಣ ಇದರ ಹಿನ್ನಲೆಯಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಅದ್ಭುತ ಸಾಲುಗಳು. ಅಲ್ಲದೇ ಫಿರೋಜ್ಪುರ್ ನಾಲಾ, ಬಾಹನ್‌ ನದಿ, ಆಲ್‌ಪಥೇರ್‌ ಕೆರೆ, ಬಾಬಾ ರಿಷಿ ಮಂದಿರಗಳು ಇದರ ಸುತ್ತಲೂ ಇರುವ ಜನಪ್ರಿಯ ತಾಣಗಳಾಗಿವೆ. ಮೀನು ಹಿಡಿಯುವುದು ಹಾಗೂ ಇತರೆ ಸಾಹಸಮಯ ಚಟುವಟಿಕೆಯಲ್ಲಿ ಪ್ರವಾಸಿಗರು ತೊಡಗಬಹುದು. ವಿಶೇಷವಾಗಿ ಜನ ಇಲ್ಲಿ ಕ್ಯಾಂಪ್‌ ಹೂಡಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat