ಗುಲ್ಮಾರ್ಗ್ ಬೈಯೋಸ್ಫಿಯರ್ ರಿಸರ್ವ್ಸ್ ಜನಪ್ರಿಯವಾಗಿರುವುದು ತರಕಾರಿ ಹಾಗೂ ವನ್ಯಜೀವಿಗಳಿಗೆ. 180 ಚದರ್ ಕಿ.ಮೀ. ವಿಸ್ತಾರವಾದ ಪ್ರದೇಶದಲ್ಲಿ ಇದು ಹರಡಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 1400 ರಿಂದ 4300 ಮೀಟರ್‌ವರೆಗೂ ಇದೆ. ಈ ಎತ್ತರವಾದ ಪ್ರದೇಶ ತರಹೇವಾರಿ ಪಕ್ಷಿಗಳ ಆವಾಸ ತಾಣವಾಗಿದೆ. ಇಲ್ಲಿಗೆ ಬರುವ ಪಕ್ಷಿ ವೀಕ್ಷಕರಿಗೆ ಎಲ್ಲಾ ವಿಧದ ಹಾಗೂ ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ಗ್ರಿಫನ್ ವಿಯುಲ್ಟರೆ, ಮೋನಲ್, ಸ್ನೋಕುಕ್ ಹಾಗೂ ಕೋಕಲಾಗಳು ಅಪಾರವಾಗಿವೆ. ಸ್ಥಳೀಯ ಹಾಗೂ ವಲಸೆ ಹಕ್ಕಿಗಳಿಂದ ತುಂಬಿರುವ ಈ ಪ್ರದೇಶದಲ್ಲಿ ಇವಲ್ಲದೇ ಯುರೋಪಿಯನ್ ಹೋಪ್, ಜಂಗಲ್ ಕ್ರೌ, ಬ್ಲ್ಯೂ ರಾಕ್ ಪಿಜನ್, ಕಶ್ಮೀರ್ ರೋಲರ್ ಇನ್ನಿತರ ಹಲವು ವಿಧದ ಪಕ್ಷಿಗಳೂ ಗೋಚರಿಸುತ್ತವೆ.
ರಿಸರ್ವ್ಸ್ ಕೇವಲ ಪಕ್ಷಿಗಳಿಗೆ ಮಾತ್ರವಲ್ಲ, ವನ್ಯಜೀವಿಗಳ ಆವಾಸವೂ ಆಗಿದೆ. ಶೇರ್ವಾಗಳು ಇಲ್ಲಿವೆ. ಮಧ್ಯಮ ಗಾತ್ರದ ಪ್ರಾಣಿಗಳು, ಕರಡಿ, ಕೆಂಪು ತೋಳ, ಮುಸ್ಕ್ ಜಿಂಕೆ ಕಾಣಸಿಗುತ್ತವೆ.
ಡೈಕೊಟಿಲೋಡೊನಸ್ ಸಸ್ಯ ಹಾಗೂ ಪೊದೆಸಸ್ಯಗಳಾದ ಸೋರ್ಬಾರಿಯಾ ಟೊಮೆಂಟೋಸಾ, ಇಂಡಿಗೋಫೆರಾ ಹೆಟೆರಾಂತಾ, ವೈಬರ್ನಮ್ ಎಸ್‌ಪಿ ಹಾಗೂ ಇನ್ನಿತರೆ ಹಲವು ವಿಧಗಳು ಕಾಣಸಿಗುತ್ತವೆ. ಇಲ್ಲಿ ಕಂಡುಬರುವ ಮರಗಳಲ್ಲಿಯೂ ಸಾಕಷ್ಟು ವಿಧಗಳಿದ್ದು, ಅದರಲ್ಲಿ ಪೈನ್, ದೇವದಾರು, ಪಿರ್ ಹಾಗೂ ಚೆಸ್ಟ್‌ನಟ್ ಗಳು ಹೆಚ್ಚಾಗಿವೆ.


Click it and Unblock the Notifications