ಗುಲ್‌ಮಾರ್ಗ್‌ನಿಂದ 13 ಕಿ.ಮೀ. ದೂರದಲ್ಲಿದೆ ಆಲ್‌ಪಥೇರ್ ಕೆರೆ. ಸಮುದ್ರ ಮಟ್ಟದಿಂದ 4511 ಮೀಟರ್ ಎತ್ತರದ ಅಫರಾವತ್ ಪರ್ವತದಲ್ಲಿ ಇದಿದೆ. ವರ್ಷದ ಬಹುತೇಕ ಸಮಯ ಅಂದರೆ ಜೂನ್ ಮಧ್ಯದವರೆಗೂ ಇದು ಘನೀಭವಿಸಿರುತ್ತದೆ. ಬೇಸಿಗೆ ಕಾಲದಲ್ಲಿ ಕೆರೆಯ ಶುದ್ಧನೀರು ಹಿಮದ ಗಡ್ಡೆಯ ಜತೆ ಕಾಣಸಿಗುತ್ತದೆ.
ಇದೊಂದು ನೋಡುಗರಿಗೆ ರಮಣೀಯ ದೃಶ್ಯ ಕಟ್ಟಿಕೊಡುತ್ತದೆ. ತ್ರಿಕೋನಾಕಾರದಲ್ಲಿರುವ ಕೆರೆಯ ರೂಪವು ತನ್ನ ಹಿನ್ನೆಲೆಯಲ್ಲಿ ಹಿಮದಿಂದ ಆವೃತ್ತವಾದ ಬೆಟ್ಟಗಳನ್ನು ಹೊಂದಿದೆ. ಆಲ್‌ಪಥೇರ್ ಕೆರೆಗೆ ಪ್ರವಾಸಿಗರು ಬರುವುದಾದರೆ ಗುಲ್‌ಮಾರ್ಗ್ ನಲ್ಲಿ ಒಂದು ದಿನ ಹೆಚ್ಚಾಗಿ ತಂಗಬೇಕು. ಕುದುರೆ ಸವಾರಿ ಇಷ್ಟಪಡುವವರು ಇಲ್ಲಿ ಒಂದುದಿನದ ಟ್ರಿಪ್ ಹೋಗಬಹುದಾಗಿದೆ. ಬೆಳಗಿನ ಜಾವ ಆರಂಭವಾಗುವ ಟ್ರಿಪ್ ಸಾಹಸಿ ಮಾರ್ಗಗಳಲ್ಲಿ ತೆರಳುತ್ತದೆ. ಅಫರಾವತ್ ಬೆಟ್ಟದ ತಪ್ಪಲು ತಲುಪಿ, ನಂತರ ಇನ್ನೊಂದು ಭಾಗದಿಂದ ಮರಳುತ್ತದೆ.


Click it and Unblock the Notifications