ತಾಮ್ರ -ಗೌರಿ ದೇವಾಲಯವು ಗೋಕರ್ಣದ ಪ್ರಸಿದ್ಧ ದೇವಾಲಯವಾಗಿದ್ದು ಈ ನಗರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಒಮ್ಮೆ ಹೋಗಿ ನೋಡಬಹುದು. ಆರು ಅಡಿ ಎತ್ತರದ ಶಿವಲಿಂಗವನ್ನು ಪೀಠದಲ್ಲಿ ಇಡಲಾಗಿರುತ್ತದೆ. ಈ ಲಿಂಗವನ್ನು ಕೇವಲ ನಾಲ್ಕು ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಆಷ್ಟ ಬಂಧನಾ ಕುಂಭಾಬಿಷೇಕದ ಸಂದರ್ಭದಲ್ಲಿ ಮಾತ್ರ ನೋಡಲು ಸಾಧ್ಯ. ಈ ದೇವಾಲಯದಲ್ಲಿ ಸ್ಥಳೀಯ ದೇವತೆಯಾದ ಗೋಕರ್ಣಾಯಕಿ ಎಂಬ ನಾಮದಲ್ಲಿ ಸ್ಥಾಪಿತವಾಗಿಹ ಮೂರುತಿಯನ್ನು ಪುಣ್ಯ ಸ್ಥಳದ ಹಿಂಭಾಗದಲ್ಲಿ ಕಾಣಬಹುದಾಗಿದೆ.