ಗಣಪತಿಪುಲೆ ಬೀಚ್ ಬಿಳಿಯ ಮತ್ತು ಬೆಳ್ಳಿಯ ಬಣ್ಣದ ಮರಳನ್ನು ಹೊಂದಿದೆ. ಇದು ಭಾರತದ ಕೆರಿಬಿಯನ್ ಎಂದೆ ಜನಜನಿತವಾಗಿದೆ. ಈ ಬೀಚು ಒಂದು ಖಾರಿಯಷ್ಟು ವಿಸ್ತಾರವಾಗಿದೆ.
ಸಮುದ್ರದ ನೀರಿನಲ್ಲಿ ಮುಳುಗಿರುವ ಬಂಡೆಗಳ ಅಪಾಯವಿರುವ ಕಾರಣದಿಂದಾಗಿ ಇಲ್ಲಿ ಈಜಾಡಲು ಅವಕಾಶ ನೀಡುವುದಿಲ್ಲ. ಕಯಾಕಿಂಗ್ ಎಂಬ ಕ್ರೀಡೆಯನ್ನು ಇಲ್ಲಿನ ಸ್ಥಳೀಯರು ಹೆಚ್ಚಾಗಿ ಆಡುತ್ತಾರೆ ಹಾಗಾಗಿ ಪ್ರವಾಸಿಗರು ಇಲ್ಲಿಗೆ ಬಂದಾಗ ಕಯಾಕಿಂಗ್ ಆಡುತ್ತಾರೆ. ಇಲ್ಲಿನ ಗಿರಿ ಶೃಂಗಗಳಿಂದ ಕಾಣುವ ವಿಹಂಗಮ ನೋಟವು ನೋಡುಗರ ಮನಸೂರೆಗೊಳ್ಳುತ್ತವೆ. ಮಾವಿನ ಮತ್ತು ಗೋಡಂಬಿಯ ಮರಗಳು ಬೀಚಿನ ಉದ್ದಕ್ಕು ಸಾಲುಗಟ್ಟಿ ಬೆಳೆದಿವೆ.
ಪ್ರಥಮ ಬಾರಿಗೆ ಇಲ್ಲಿಗೆ ಭೇಟಿಕೊಡುವವರು ಈ ಬೀಚಿನ ಬಳಿ ದೊರೆಯುವ ಮರಾಠಿ ಖಾದ್ಯಗಳ ರುಚಿ ನೋಡಬಹುದು. ಇಲ್ಲಿ ಒಂಟೆ ಮೇಲೆ ಸವಾರಿ ಮಾಡುವ ಮೋಜನ್ನು ಸಹ ಅನುಭವಿಸಬಹುದು.


Click it and Unblock the Notifications