Search
  • Follow NativePlanet
Share
ಮುಖಪುಟ » ಸ್ಥಳಗಳು » ಗಣಪತಿಪುಲೆ » ಹವಾಮಾನ

ಗಣಪತಿಪುಲೆ ಹವಾಮಾನ

ಚಳಿಗಾಲವು ಇಲ್ಲಿಗೆ ಭೇಟಿಕೊಡಲು ಉತ್ತಮಕಾಲವಾಗಿದೆ. ಬೀಚುಗಳಲ್ಲಿ ಹಾಗು ಸುತ್ತ - ಮುತ್ತ ಸುತ್ತಾಡಲು ಇಲ್ಲಿನ ತಂಪಾದ ಹವೆಯಿಂದಾಗಿ ಈ ಸಮಯ ಪ್ರವಾಸಿಗರಿಗೆ ಅತ್ಯಂತ ಸೂಕ್ತವಾಗಿದೆ.

ಬೇಸಿಗೆಗಾಲ

ಗಣಪತಿಪುಲೆಯು ಬೇಸಿಗೆಯಲ್ಲಿ ಸ್ವಲ್ಪಮಟ್ಟಿಗೆ ಮುದನೀಡುವ ಬಿಸಿಲಿನಿಂದ ಕೂಡಿರುತ್ತದೆ. ಆಗ ಇಲ್ಲಿನ ಗರಿಷ್ಠ ಉಷ್ಣಾಂಶವು 38°ಸೆಲ್ಶಿಯಸ್ ವರೆಗು ಏರುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದನ್ನು ಮುಂದೂಡುವುದು ಉತ್ತಮ. ವಿಶೇಷವಾಗಿ ಮೇ ತಿಂಗಳಿನಲ್ಲಿ ಇಲ್ಲಿಗೆ ಭೇಟಿಕೊಡದಿರುವುದೆ ಉತ್ತಮ.

ಮಳೆಗಾಲ

ಗಣಪತಿಪುಲೆಯಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ಮಳೆ ಬೀಳುತ್ತದೆ. ಇದು ಇಲ್ಲಿನ ಏರುವ ಉಷ್ಣಾಂಶದಿಂದ ಸ್ವಲ್ಪ ಮಟ್ಟಿಗೆ ಬದಲಾವಣೆ ಕೊಡುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಇಲ್ಲಿ ಚಳಿಗಾಲದ ಅವಧಿ ಇದ್ದು, ವಾತಾವರಣವು ಅತ್ಯುತ್ತಮವಾಗಿರುತ್ತವೆ. ಆಗ ಇಲ್ಲಿನ ಹವಾಮಾನವು ತಂಪಾಗಿ ಮತ್ತು ಮಾಲಿನ್ಯರಹಿತವಾಗಿರುತ್ತದೆ. ರಾತ್ರಿಗಳ ವೇಳೆಯಲ್ಲಿ ಇಲ್ಲಿನ ಉಷ್ಣಾಂಶವು ಮತ್ತಷ್ಟು ಇಳಿಮುಖವಾಗುತ್ತದೆ.