ತಾಶಿ ವಿವ್ಯೂ ಪಾಯಿಂಟ್, ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ತಾಶಿ ವಿವ್ಯೂ ಪಾಯಿಂಟ್

ತಾಶಿ ವಿವ್ಯೂ ಪಾಯಿಂಟ್ ಸುಂದರ ತಾಣ. ಗ್ಯಾಂಗ್ಟಾಕ್ ನಿಂದ ಇದು 8 ಕಿ.ಮೀ. ದೂರದಲ್ಲಿದೆ. ಕಾಂಜನಜುಂಗಾ ಬೆಟ್ಟದ ಮನಮೋಹಕ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರವಾಸಿಗಳು ವಿಶ್ರಾಂತಿ ಪಡೆಯಲು ಮತ್ತು ಖುಷಿಯಿಂದ ಸಕ್ರಿಯಗೊಳ್ಳಲು ಇಲ್ಲಿ ಒಂದು ಕೆಫೆಟೇರಿಯಾ ಮತ್ತು ವೀಕ್ಷಣಾ ಗೋಪುರವನ್ನು ಸ್ಥಾಪಿಸಲಾಗಿದೆ. ಕಾಂಚನಜುಂಗಾದ ಸೌಂದರ್ಯವನ್ನು ಹೊರತುಪಡಿಸಿ ಗ್ಯಾಂಗ್ಟಾಕ್ ಗೆ ನಿಕಟವಾಗಿರುವ ಪೊಡೊಂಗ್ ಮತ್ತು ಲಬ್ರಾಂಗ್ ಮಠಗಳನ್ನು ನೋಡಬಹುದಾಗಿದೆ.

ನಿಮ್ಮ ಭೇಟಿ ಸ್ಮರಣೀಯವಾಗಿಸಿಕೊಳ್ಳಲು ಬಯಸುವುದಾದರೆ ಇಲ್ಲಿಗೆ ಮುಂಜಾನೆ ವೇಳೆ ಭೇಟಿ ನೀಡಿ. ವಿವ್ಯೂ ಪಾಯಿಂಟ್ ನಿಂದ ಸ್ವಲ್ಪ ಮುಂದಕ್ಕೆ ಪಾರ್ಕ್ ಇದ್ದು, ಅಲ್ಲಿಗೆ ಹೋಗಿ ವಿಶ್ರಾಂತಿ ಪಡೆದು ಚಾ, ಕಾಫಿ, ತಿಂಡಿ ತಿಂದು ಆನಂದಿಸಿ.

Please Wait while comments are loading...