ಕರಕುಶಲ ಮತ್ತು ಕೈಮಗ್ಗದ ನಿರ್ದೇಶನಾಲಯ(ಡಿಎಚ್ ಎಚ್), ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಕರಕುಶಲ ಮತ್ತು ಕೈಮಗ್ಗದ ನಿರ್ದೇಶನಾಲಯ(ಡಿಎಚ್ ಎಚ್)

ಇದು ಸರ್ಕಾರಿ ಸ್ವಾಮ್ಯದ ಸಂಸ್ಥೆ. ಕಲೆಯನ್ನು ಇಷ್ಟಪಡುವ ಪ್ರತಿಯೊಬ್ಬರು ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ಸಾಂಪ್ರದಾಯಿಕ ಕಲೆ ಮತ್ತು ಸಿಕ್ಕಿಂ ನ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡಲು 1957ರಲ್ಲಿ ಇದನ್ನು ಸ್ಥಾಪಿಸಲಾಯಿತು. ಡಿಎಚ್ ಎಚ್ ನಲ್ಲಿ ಕೈಯಿಂದ ಹೆಣೆದ ಹೊದಿಕೆಗಳು, ಶಾಲುಗಳು, ರತ್ನಗಂಬಳಿಗಳು, ಕೆತ್ತಿದ ಮರದ ಕರಕುಶಲ ವಸ್ತುಗಳು ಹೀಗೆ ಹಲವಾರು ವಸ್ತುಗಳಿವೆ. ಗ್ಯಾಂಗ್ಟಾಕ್ ನಲ್ಲಿ ಡಿಎಚ್ ಎಚ್ ನ ಮುಖ್ಯ ಕಚೇರಿಯಿದೆ. ಸಿಕ್ಕಿಂ ಇತರ 20 ಸ್ಥಳಗಳಲ್ಲಿ ಇದರ ಶಾಖೆಗಳಿವೆ. ಇದು ತರಬೇತಿ ಹಾಗೂ ನಿರ್ಮಾಣ ಸಂಸ್ಥೆಯಾಗಿದೆ.

ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆ ತನಕ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿನ ವ್ಯಾಪಾರಿ ಮಳಿಗೆ ವರ್ಷದ ಎಲ್ಲಾ ದಿನವೂ ತೆರೆದಿರುತ್ತದೆ.

Please Wait while comments are loading...