ಬಾಬಾ ಹರ್ಭಜನ್ ಸಿಂಗ್ ಸ್ಮಾರಕ ಮಂದಿರ, ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಬಾಬಾ ಹರ್ಭಜನ್ ಸಿಂಗ್ ಸ್ಮಾರಕ ಮಂದಿರ

ಬಾಬಾ ಹರ್ಭಜನ್ ಸಿಂಗ್ ಸ್ಮಾರಕ ಮಂದಿರವು ಜೆಲೆಪ್ಲಾ ಪಾಸ್ ಮತ್ತು ನಾಥು ಲಾ ಪಾಸ್ ಮಧ್ಯೆ ಇದೆ. ಈ ಮಂದಿರಕ್ಕೆ ಪ್ರತೀ ದಿನ ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಈ ಮಂದಿರದಲ್ಲಿ ಭಕ್ತರ ಬೇಡಿಕೆ ಈಡೇರುತ್ತದೆ ಎನ್ನುವ ಪ್ರತೀತಿಯಿದ್ದು, ಜನರು ಒಂದು ಬಾಟಲಿ ನೀರನ್ನು ಇಲ್ಲಿ ಬಿಟ್ಟುಹೋಗಿ ಮತ್ತೊಮ್ಮೆ ಭೇಟಿ ನೀಡುವಾಗ ಅದನ್ನು ಕೊಂಡೊಯ್ಯುವ ಸಂಪ್ರದಾಯವಿದೆ.

ಈ ಮಂದಿರದ ಕೆಲವು ಆಸಕ್ತಿಯ ವಿಷಯಗಳು:

23ನೇ ಪಂಜಾಬ್ ರೆಜಿಮೆಂಟ್ ನ ಸಿಪಾಯಿಯಾಗಿದ್ದ ಬಾಬಾ ಹರ್ಭಜನ್ ಸಿಂಗ್ ನೆನಪಿನಲ್ಲಿ ಈ ಸ್ಮಾರಕವನ್ನು ಕಟ್ಟಲಾಯಿತು. 30 ವರ್ಷಗಳ ಮೊದಲು ಪೂರ್ವ ಸಿಕ್ಕಿಂನ ಅತ್ಯಂತ ಡೆಂಗ್ ಢುಕ್ಲಾ ಎನ್ನುವ ಗ್ರಾಮೀಣ ಪ್ರದೇಶಕ್ಕೆ ಹೇಸರಗತ್ತೆಗಳೊಂದಿಗೆ ಹೋಗಿದ್ದಾಗ ಅವರು ನಾಪತ್ತೆಯಾಗಿದ್ದರು. ಅವರ ಹುಡುಕಾಟ ನಡೆಸಿದ ಮೂರು ದಿನಗಳ ಬಳಿಕ ಬಾಬಾ ಶವವು ಪತ್ತೆಯಾಗಿತ್ತು. ಶವ ಸಿಗಲು ಒಂದು ಕಾರಣವಿದೆ. ಬಾಬಾರನ್ನು ಹುಡುಕುತ್ತಿದ್ದ ಸಹೋದ್ಯೋಗಿಯೊಬ್ಬನ ಕನಸಿನಲ್ಲಿ ಬಂದು ನನ್ನ ಶವ ಇಂತಹ ಸ್ಥಳದಲ್ಲಿದೆ ಮತ್ತು ನನಗೊಂದು ಸ್ಮಾರಕವನ್ನು ಕಟ್ಟಬೇಕೆಂದು ಹೇಳಿದ್ದರಂತೆ. ಇದಕ್ಕಾಗಿ ಮಂದಿರವನ್ನು ಕಟ್ಟಲಾಗಿತ್ತು.ಮಂದಿರದಲ್ಲಿ ಒಂದು ಸಮಾದಿಯಿದೆ. ಈ ಸಮಾದಿಗೆ ಪ್ರತೀ ದಿನ ರಾತ್ರಿ ಬಾಬಾ ಭೇಟಿ ನೀಡುತ್ತಾರೆಂದು ಹೇಳಲಾಗುತ್ತಿದೆ. ಭಾರತ-ಚೀನಾ ಗಡಿಯಲ್ಲಿ ಗಸ್ತು ನಿರತರಾಗಿರುವ ಸೈನಿಕರ ಪ್ರಾಣವನ್ನು ಅವರು ಕಾಪಾಡುತ್ತಾರೆಂಬ ನಂಬಿಕೆಯಿದೆ.

ವಿಚಿತ್ರವೆಂದರೆ ಪ್ರತೀ ಸಪ್ಟೆಂಬರ್ 14ರಂದು ಬಾಬಾ ವಾರ್ಷಿಕ ರಜೆಯಲ್ಲಿ ತನ್ನ ಊರಾದ ಪಂಜಾಬ್ ನ ಕಪುರ್ತಲಕ್ಕೆ ಹೋಗುತ್ತಾರೆ. ಅವರ ವೈಯಕ್ತಿಕ ಸಾಮಗ್ರಿಗಳನ್ನು ಹೊತ್ತುಕೊಂಡ ಜೀಪ್ ಹತ್ತಿರದ ರೈಲ್ವೆ ಸ್ಟೇಷನ್ ಗೆ ಹೋಗುತ್ತದೆ. ಅಲ್ಲಿ ಒಂದು ಟಿಕೆಟ್ ಬುಕ್ ಮಾಡಲಾಗುತ್ತದೆ ಮತ್ತು ಇಬ್ಬರು ಯೋಧರು ಅವರೊಂದಿಗೆ ಹೋಗುತ್ತಾರೆ. ಪ್ರತೀ ತಿಂಗಳು ಬಾಬಾರ ತಾಯಿಗೆ ಹಣ ಕೂಡ ರವಾನೆಯಾಗುತ್ತದೆ.

Please Wait while comments are loading...