ಈರೋಡ್ ಜಿಲ್ಲೆಯ ಸಮೀಪದಲ್ಲಿ ವೆಲ್ಲೋಡ್ ಪಕ್ಷಿಧಾಮವಿದೆ. ಇದನ್ನು ಇಡಿ ರಾಜ್ಯದಲ್ಲೇ ಅತೀ ದೊಡ್ಡ ಪಕ್ಷಿಧಾಮವೆಂದು ಗುರುತಿಸಲಾಗುತ್ತದೆ ಹಾಗೂ ಪಕ್ಷೀ ಪ್ರೇಮಿಗಳ ಸ್ವರ್ಗವೆಂದೂ ಹೇಳಲಾಗುತ್ತದೆ. 1996 ರಲ್ಲಿ ಸ್ಥಾಪನೆಯಾದ ಈ ಪಕ್ಷಿಧಾಮವನ್ನು ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ನಿರ್ವಹಣೆ ಮಾಡುತ್ತಿದೆ.
ಇದು ಈರೋಡಿನ ಕೇಂದ್ರೀಯ ಬಸ್ ನಿಲ್ದಾಣದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ವೆಲ್ಲೋಡಿನ ಚಿನ್ನಮಲೈ ಗೆ ಹೋಗುವ ದಾರಿಯಲ್ಲಿ ಈ ಪಕ್ಷಿಧಾಮವಿದೆ. ಇದು ಬಹಳ ವಿಸ್ತಾರವಾಗಿದ್ದು ಇದರ ಮಧ್ಯದಲ್ಲಿ ಕೆರೆಯೊಂದನ್ನೂ ಸಹ ಕಾಣಬಹುದಾಗಿದೆ. ಇದು ಸುಮಾರು 0.3 ಚದರ ಮೈಲ್ಸ್ ವಿಸ್ತಾರವಾಗಿದೆ. ಇಲ್ಲಿನ ಸ್ಥಳೀಯರು ಇದನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗಾಗಿ ಇಲ್ಲಿ ಎಂದೂ ಪಕ್ಷಿಗಳು ಬರುವುದು ಕಡಿಮೆಯಾಗುವುದಿಲ್ಲ. ನವೆಂಬರ್ ನಲ್ಲಿ ಆರಂಭವಾಗುವ ಋತುಮಾನ ಮಾರ್ಚ್ ತಿಂಗಳ ತನಕವೂ ಮುಂದುವರೆಯುತ್ತದೆ. ಇಲ್ಲಿ ಹಲವಾರು ವೀಕ್ಷಣಾಲಯಗಳೂ ಇವೆ.


Click it and Unblock the Notifications