ಈರೋಡ್ ನಗರಕ್ಕೆ ಕೊಯಮತ್ತೂರು, ಚೆನ್ನೈ, ಕೊಚ್ಚಿ ಮತ್ತು ತಿರುವನಂತಪುರ-ಬೆಂಗಳೂರು ಮುಂತಾದ ಭಾರತದ ವಿವಿಧ ಪ್ರಮುಖ ಪಟ್ಟಣಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಖಾಸಗಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಈರೋಡ್ ನಲ್ಲಿ ಸುಲಭವಾಗಿ ದೊರೆಯುತ್ತವೆ. ಪ್ರವಾಸಿಗರು, ಟ್ರಾವೆಲ್ ಏಜೆಂಟ್ಸ್ ಸಹಾಯದಿಂದ ಈರೋಡ್ ಒಳಗೆ ಅಥವಾ ನಗರ ಹೊರಗೆ ಪ್ರಯಾಣ ಮಾಡಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಬುಕ್ ಮಾಡಬಹುದು.