Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಹವಾಮಾನ

ಈರೋಡ್ ಹವಾಮಾನ

ಸಾಮಾನ್ಯವಾಗಿ ಈರೋಡ್ ವಾತಾವರಣವು ವರ್ಷದುದ್ದಕ್ಕೂ ಶುಷ್ಕವಾಗಿರುತ್ತದೆ. ಆದಾಗ್ಯೂ, ಈರೋಡ್ ನಗರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗಿನ ಅವಧಿ.

ಬೇಸಿಗೆಗಾಲ

ಈರೋಡ್ ನಗರದಲ್ಲಿ ಬೇಸಿಗೆಯು ಮಾರ್ಚ್ ಋತುವಿನಲ್ಲಿ ಪ್ರಾರಂಭವಾಗಿ ಮತ್ತು ಮೇ ತನಕ ಮುಂದುವರಿಯುತ್ತದೆ. ಬೇಸಿಗೆ ಕಾಲದಲ್ಲಿ ತಾಪಮಾನ 23 ಡಿಗ್ರಿ ಸೆಲ್ಷಿಯಸ್ ನಿಂದ 34 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಗರಿಷ್ಠ ತಾಪಮಾನ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ದಾಖಲಾಗುತ್ತದೆ.

ಮಳೆಗಾಲ

ಮಳೆಗಾಲ ಈರೋಡ್ ನಲ್ಲಿ ಜೂನ್ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಮುಗಿಯುತ್ತದೆ. ಈ ಸಮಯದಲ್ಲಿನ ಮಳೆ ಜನರನ್ನು ಬಿಸಿಲಿನ ಶಾಖದಿಂದ ತಪ್ಪಿಸುವುದಿಲ್ಲ. ಈ ನಗರದಲ್ಲಿ ಒಂದು ವರ್ಷದಲ್ಲಿ ಆಗುವ ಒಟ್ಟು ಮಳೆ 100 ಮಿಮೀ ನಷ್ಟು. ಮಳೆಗಾಲದಲ್ಲಿ ಗರಿಷ್ಠ ಮಳೆ 30 ಎಂಎಂ ನಷ್ಟು. ಈಶಾನ್ಯ ಮಾನ್ಸೂನ್ ಅವಧಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು. ನೈಋತ್ಯ ಮಾನ್ಸೂನ್ ಅವಧಿಯು ಜೂನ್ ನಿಂದ ಆಗಸ್ಟ್ ನಡುವಿನ ಅವಧಿ. ಈ ಅವಧಿಯಲ್ಲಿ ಈರೋಡ್ ತಾಲ್ಲೂಕುಗಳು ಹೆಚ್ಚು ಮಳೆಯನ್ನು ಪಡೆಯುತ್ತವೆ.

ಚಳಿಗಾಲ

ಈರೋಡ್ ನಲ್ಲಿ ಮಳೆ, ಡಿಸೆಂಬರ್ ತಿಂಗಳಿನಲ್ಲಿ ಕಣ್ಮರೆಯಾಗಿ ಹೋಗುತ್ತದೆ, ಆಕಾಶ ಸ್ಪಷ್ಟವಾಗುತ್ತದೆ. ಹವಾಮಾನ ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಚಳಿಗಾಲದ ತಿಂಗಳಲ್ಲಿ ತಾಪಮಾನ (ಅಂದರೆ ಡಿಸೆಂಬರ್ ನಿಂದ ಫೆಬ್ರವರಿ) 13 ಡಿಗ್ರಿ ಸೆ. ನಿಂದ 24 ಡಿಗ್ರಿ ಸೆಲ್ಷಿಯಸ್ ದಾಖಲಾಗುತ್ತದೆ.