ತಮಿಳುನಾಡಿನ ಸುಂದರವಾದ ಮತ್ತು ಹಳೆಯದಾದ ಚರ್ಚುಗಳಲ್ಲಿ ಬ್ರಾಗ್ ಚರ್ಚ್ ಮೊದಲ ಸ್ಥಾನದಲ್ಲಿದೆ. ಆಂಟನಿ ವಾಟ್ಸನ್ ಬ್ರಾಗ್ ಎಂಬ ಆಸ್ಟ್ರೇಲಿಯಾದ ಮಿಷನರಿ ಈ ಚರ್ಚನ್ನು ಕಟ್ಟಿದ ಎಂದು ನಂಬಲಾಗಿದೆ. ಇದರ ಜೊತೆಗೆ ಆತ ಈ ಊರಿನ ಜನರಿಗೆ ಬಹಳ ನೆರವಾಗುವ ಕೆಲಸಗಳನ್ನು ಮಾಡಿದ್ದನು. ಆದ್ದರಿಂದ ಈ ಚರ್ಚಿನ ಅಧಿಕಾರಿಗಳು ಇಂದಿಗೂ ಜನರಿಗೆ ನೆರವಾಗುವಂತಹ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. 1928-29 ರಲ್ಲಿ ಈ ಚರ್ಚನ್ನು ಈರೋಡ್ ನರಗದಲ್ಲಿ ಸ್ಥಾಪಿಸಲಾಗಿತ್ತು. ಪನೀರ್ ಸೆಲ್ವಂ ಉದ್ಯಾನದ ಸಮೀಪ ಇರುವ ಈ ಚರ್ಚ್ ನಗರದ ಮಧ್ಯಭಾಗದಲ್ಲಿ ಇದೆ. ಇದರ ಅಧಿಕಾರಿಗಳು ಸ್ಥಂಬಗಳನ್ನು ಮತ್ತು ಛಾವಣಿಯನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ವಾಸ್ತಿಶಿಲ್ಪದ ಶೈಲಿ ಇಂಡೋ-ಸರಾಕೆನಿಕ್ ಶೈಲಿಯಲ್ಲಿದೆ. ಇದನ್ನು ಕ್ರೈಸ್ತರ ಜೊತೆಗೆ ಮುಸ್ಲೀಮರನ್ನು ಸೆಳೆಯುವ ಕಾರಣದಿಂದ ಮಾಡಲಾಗಿತ್ತು. ಪ್ರತಿದಿನವೂ ಇಲ್ಲಿ ದೇಶದ ನಾನಾ ಭಾಗದಿಂದ ಭಕ್ತರು ಬರುವುದನ್ನು ಕಾಣಬಹುದು.