ಫತೇಹ್‌ಗಡವು ಗೈಬ್ ಸಾಗರ ಕೆರೆಯ ವಿರುದ್ಧ ದಿಕ್ಕಿನಲ್ಲಿರುವ ಒಂದು ಬೆಟ್ಟವಾಗಿದೆ. ಪ್ರವಾಸಿಗರು ಇಲ್ಲಿಂದ ಇಡೀ ಡುಂಗರಪುರದ ಪಕ್ಷಿನೋಟವನ್ನು ನೋಡಬಹುದು. ಬಾದಲ್ ಮಹಲ್, ಗೈಬ್ ಸಾಗರ ಕೆರೆ ಮತ್ತು ಸುಂದರವಾದ ಉದಯ ವಿಲಾಸ ಅರಮನೆಯನ್ನು ಒಳಗೊಂಡಂತೆ ನಯನಮನೋಹರ ದೃಶ್ಯವನ್ನು ಇಲ್ಲಿಂದ ಕಣ್ತುಂಬಿಸಿಕೊಳ್ಳಬಹುದು. ಒಂದು ಸಣ್ಣ ಹನುಮಂತನ ದೇವಸ್ಥಾನವು ಈ ಗುಡ್ಡದ ಮೇಲಿದೆ. ಜೊತೆಗೆ ವಿವೇಕಾನಂದರ ಬೃಹತ್ ಮೂರ್ತಿಯೂ ಕೂಡಾ ಇದೆ.


Click it and Unblock the Notifications