Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಹವಾಮಾನ

ಡುಂಗಾರಪುರ್ ಹವಾಮಾನ

ಅಕ್ಟೋಬರಿನಿಂದ ನವೆಂಬರಿನ ಅವಧಿಯು ಈ ಪ್ರದೇಶಕ್ಕೆ ಪ್ರವಾಸ ಮಾಡುವ ಉತ್ತಮ ಕಾಲ. ಯಾಕೆಂದರೆ ಈ ಅವಧಿಯಲ್ಲಿ ವಾತಾವರಣವು ತಂಪಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಮೇ): ಬೇಸಿಗೆಕಾಲವು ಮಾರ್ಚ್‌‌ನಲ್ಲಿ ಆರಂಭವಾಗಿ ಮೇಯಲ್ಲಿ ಕೊನೆಗೊಳ್ಳುತ್ತದೆ. ಗರಿಷ್ಟ ಮತ್ತು ಕನಿಷ್ಟ ತಾಪಮಾನವು 42 ಡಿಗ್ರಿ ಮತ್ತು 25 ಡಿಗ್ರಿ ಇರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಗೆ ಪ್ರವಾಸ ಮಾಡುವುದು ಸೂಕ್ತವಲ್ಲ. ಯಾಕೆಂದರೆ ಈ ಸಂದರ್ಭದಲ್ಲಿ ಅತಿಯಾದ ಉಷ್ಣತೆಯಿರುತ್ತದೆ.

ಮಳೆಗಾಲ

(ಜೂ‌ನ್‌ನಿಂದ ಸಪ್ಟೆಂಬರ‍್): ಜೂನ್‌ ತಿಂಗಳು ಮಳೆಗಾಲ ಆರಂಭವಾದರೆ ಸಪ್ಟೆಂಬರಿನಲ್ಲಿ ಕೊನೆಯಾಗುತ್ತದೆ. ಮಳೆಗಾಲದಲ್ಲಿ ಸರಾಸರಿ ತಾಪಮಾನವು 30 ಡಿಗ್ರಿ ಇರುತ್ತದೆ. ಬೇಸಿಗೆಕಾಲದ ಕುದಿಯುವ ಬೇಸಿಗೆಯು ಮಳೆಯಿಂದಾಗಿ ತಂಪಾಗುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ಡಿಸೆಂಬರ‍್, ಜನವರಿ ಮತ್ತು ಫೆಬ್ರುವರಿಯು ಈ ‌ಪ್ರದೇಶದ ಚಳಿಗಾಲದ ಸಮಯ. ಗರಿಷ್ಟ ಮತ್ತು ಕನಿಷ್ಟ ತಾಪಮಾನವು 22 ಡಿಗ್ರಿ ಮತ್ತು 9 ಡಿಗ್ರಿಯಾಗಿರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಪ್ರವಾಸ ಮಾಡುವುದಾದರೆ ಉಣ್ಣೆ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ.