Search
  • Follow NativePlanet
Share

ದಿಘಾದ ಕಡಲ ತೀರದಲ್ಲಿ...

13

ಅನೇಕ ವರ್ಷಗಳಿಂದ ಧಿಘಾವು ಕೋಲ್ಕತ್ತ ಮತ್ತು ಖರ್ಗಪುರ , ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ಪ್ರದೇಶದ ಸುತ್ತಮುತ್ತಲಿರುವ ಚಿಕ್ಕ ನಗರಗಳ ಜನರಿಗೆ ಅತ್ಯಂತ ಪ್ರೀತಿಯ ವಾರಾಂತ್ಯದ ವಿಹಾರ ತಾಣವಾಗಿದೆ. ದಿಘಾವನ್ನು ಕೋಲ್ಕತ್ತ ಮತ್ತು ಖರ್ಗಪುರದಿಂದ ರಸ್ತೆ ಸಾರಿಗೆ ಮತ್ತು ರೇಲ್ವೆಗಳ ಮೂಲಕ ಮೂಲಕ ತಲುಪಬಹುದು.

ಅವಳಿ ಕಡಲ ತೀರಗಳು

ದಿಘಾದ ಪ್ರವಾಸೋದ್ಯಮ ಪ್ರಾಧಿಕಾರವು ಇಲ್ಲಿ ಅವಳಿ ಕಡಲ ತೀರಗಳನ್ನು ಅಭಿವೃದ್ಧಿಗೊಳಿಸಿದೆ. ಇದು ಮೂಲಸ್ಥಾನದಿಂದ ಎರಡು ಕೀಲೊ ಮೀಟರ ದೂರದಲ್ಲಿದೆ. ಮೂಲವು ಹೆಚ್ಚು ದೊಡ್ಡದಾಗಿದ್ದು, ಉತ್ತಮ ವ್ಯವಸ್ಥೆಯಿಂದ ಕೂಡಿದ್ದು, ಸುಸಜ್ಜಿತವಾಗಿದೆ. ಇಲ್ಲಿ ಉಳಿದುಕೊಳ್ಳಲು ಹೋಟೆಲು ವ್ಯವಸ್ಥೆಗಳಿವೆ. ಚಳಿಗಾಲದಲ್ಲಿ ಇಲ್ಲಿ ಉಂಟಾಗುವ ಜನಜಂಗುಳಿಯನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಲಾಗುತ್ತದೆ.

ಒಂದು ವಿಶ್ರಾಂತ ರಜಾ ತಾಣ

ದಿಘಾ ಒಂದು ಅತ್ಯುತ್ತಮ ಸ್ಥಳವಾಗಿದ್ದು ತನ್ನ ಕಡಲ ತೀರದಿಂದ ಹೆಚ್ಚು ಪ್ರಸಿದ್ದವಾಗಿದೆ. ಇಲ್ಲಿ ಮಧ್ಯಾಹ್ನದ ವೇಳೆ ಕಡಲ ತೀರದಲ್ಲಿ ಮನರಂಜನೆಯನ್ನು ಅನುಭವಿಸಬಹುದು.ಇಲ್ಲಿ ಶಾಕ್ಸ ದಂತಹ ಸಾಗರ ಆಹಾರಗಳನ್ನು ತಿನ್ನಲು ಅವಕಾಶವಿದೆ. ಧಿಘಾಕ್ಕೆ ಪ್ರವಾಸ ಹೊರಡುವುದು ಅಷ್ಟೊಂದು ವೆಚ್ಚದಾಯಕವಲ್ಲ. ಇಲ್ಲಿ ವಸತಿಗೆ ಮತ್ತು ಪ್ರಯಾಣಕ್ಕೆ ಕೆಲವು ಸಾವಿರ ರೂಪಾಯಿಗಳು ಮಾತ್ರ ಸಾಕು.

ದಿಘಾದ ಕಡಲ ತೀರದ ಸುತ್ತಲೂ ಅಪಾರವಾದ ಸಸ್ಯವರ್ಗ ಮತ್ತು ನೆಡುತೋಪುಗಳು ಇವೆ. ಇದು ಸಮುದ್ರಕ್ಕೆ ಹೆಚ್ಚಿನ ಮೆರಗು ನೀಡಿದೆ. ಇದನ್ನು ನೋಡಿದ ಪ್ರತಿಯೊಬ್ಬ ವ್ಯಕ್ತಿಯೂ ಮೂಕವಿಸ್ಮಿತನಾಗುವುದರಲ್ಲಿ ಸಂಶಯವಿಲ್ಲ. ಧಿಘಾದ ಸಮೀಪದಲ್ಲಿಯೇ ಒಂದು ದೇವಸ್ಥಾನವಿದ್ದು, ಇದು ಶಿವನಿಗೆ ಸಮರ್ಪಿತವಾಗಿದೆ.

ದಿಘಾ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಇಲ್ಲಿ ಜುನಪುತ್, ಶಂಕರಪುರ, ಸುಬರ್ಣ ರೇಖಾ ನದಿ, ತಲಸರಿ ಮತ್ತು ಮಂದರಮಣಿ ಅಂತಹ ಅನೇಕ ಪ್ರವಾಸಿ ಆಕರ್ಷಕ ತಾಣಗಳಿವೆ. ಇದು ಪ್ರೇಮಿಗಳಿಗೆ, ಮಕ್ಕಳಿಗೆ ಮತ್ತು ಕುಟುಂಬದವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮರೈನ ಅಕ್ವೆರಿಯಂ ಮತ್ತು ರಿಸರ್ಚ ಸೆಂಟರ್ ಒಂದು ಉತ್ತಮ ಸ್ಥಳವಾಗಿದ್ದು ಮಧ್ಯಾಹ್ನದ ಸಮಯವನ್ನು ಇಲ್ಲಿ ಮೌಲ್ಯಯುತವಾಗಿ ಕಳೆಯಬಹುದು. ಮತ್ತು ಇಲ್ಲಿನ ಕಡಲ ತೀರದಲ್ಲಿ ಅನೇಕ ಜಲ ಕ್ರೀಡೆಗಳನ್ನು ಆಡಬಹುದು. ದಿಘಾ ವಿಜ್ಞಾನ ಕೇಂದ್ರವು ಇನ್ನೊಂದು ಸ್ಥಳವಿದ್ದು, ಇದು ಮಕ್ಕಳಿಗೆ ಅತ್ಯಂತ ಪ್ರೀತಿಯ ತಾಣವಾಗಿದೆ.

ದಿಘಾದಲ್ಲಿ ಶಾಪಿಂಗ್:

ಇಲ್ಲಿನ ಕಡಲ ತೀರಗಳು ಅಂಗಡಿ ಮತ್ತು ಮಳಿಗೆಗಳ ಸಾಲಿನಿಂದ ತುಂಬಿಕೊಂಡಿದೆ. ಈ ಅಂಗಡಿ ಮತ್ತು ಮಳಿಗೆಗಳಲ್ಲಿ ಉತ್ತಮ ಆಹಾರ, ತಂಪಾದ ಪಾನೀಯಗಳು, ಮುಂತಾದ ಸ್ಥಳೀಯ ಮತ್ತು ಪ್ರವಾಸಿಗರಿಗೆ ಅವಶ್ಯಕವಿರುವ ವಸ್ತುಗಳನ್ನು ಇಲ್ಲಿ ವ್ಯಾಪಾರ ಮಾಡಲಾಗುತ್ತದೆ. ದಿಘಾ ನಗರಕ್ಕ ಎಲ್ಲ ವಯಸ್ಸಿನವರು ಭೇಟಿ ಕೊಡಬಹುದು. ದಿಘಾ ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ನೀವು ಕೋಲ್ಕತ್ತಾ ಅಥವಾ ಖರ್ಗಪುರಕ್ಕೆ ಬಂದರೆ ದಿಘಾ ನಗರಕ್ಕೆ ಭೇಟಿ ಕೊಡಲೇ ಬೇಕು.

ದಿಘಾವನ್ನು ತಲುಪುವುದು ಹೇಗೆ?

ದಿಘಾವು ಉತ್ತಮ ರಸ್ತೆ ಸಾರಿಗೆ ಮತ್ತು ರೇಲ್ವೆ ಸೌಲಭ್ಯ ಸಂಪರ್ಕವನ್ನು ಹೊಂದಿದೆ. ಕೋಲ್ಕತ್ತ ಇದಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ.

ದಿಘಾ ಪ್ರಸಿದ್ಧವಾಗಿದೆ

ದಿಘಾ ಹವಾಮಾನ

ಉತ್ತಮ ಸಮಯ ದಿಘಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಿಘಾ

  • ರಸ್ತೆಯ ಮೂಲಕ
    ಕೊಲ್ಕತ್ತ ಮತ್ತು ಖರ್ಗಪುರದಿಂದ ದಿಘಾಕ್ಕೆ ಪ್ರತಿ ದಿನವು ನಿಯಮಿತ ಬಸ್ಸುಗಳ ಸೇವಾ ಸೌಲಭ್ಯವಿದೆ. ಕೋಲ್ಕತ್ತದಿಂದ ಧಿಘಾ ವನ್ನು ತಲುಪಲು ಸುಮಾರು ಗಂಟೆಗಳು ಬೇಕು. ದಿಘಾ ನಗರದಿಂದ ಕೋಲ್ಕತ್ತಾ ನಗರವು ದಿಘಾದಿಂದ ಸುಮಾರು 182 ಕೀಲೊ ಮೀಟರ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಿಘಾವು ನೇರವಾಗಿ ಕೊಲ್ಕತ್ತಾದ ಹೌರಾ ರೇಲ್ವೆ ಸ್ಟೇಷನ ನೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಿಘಾಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಕೊಲ್ಕತ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ದಿಘಾದಿಂದ ಸುಮಾರು 180 ಕೀಲೊ ಮೀಟರ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu