ಕಾಳಿ ನದಿಯು ಗ್ರೇಟರ್ ಹಿಮಾಲಯದ ಕಾಲಾಪಾನಿಯಲ್ಲಿ ಉಗಮಗೊಳ್ಳುತ್ತದೆ. ಈ ಸ್ಥಳವು ಪಿಥೋರಗಡ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 3600 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿ ಒಂದು ಕಾಳಿ ಮಾತೆಯ ದೇವಾಲಯವಿದೆ. ಹಾಗಾಗಿಯೇ ಈ ನದಿಗೆ ಈ ಹೆಸರು ಬಂದಿದೆ. ಈ ನದಿಯು ಭಾರತ ಮತ್ತು ನೇಪಾಳ ದೇಶಗಳ ಪ್ರಾಕೃತಿಕ ಗಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಉತ್ತರ್ ಖಂಡ್ ರಾಜ್ಯದಿಂದ ಉತ್ತರ್ ಪ್ರದೇಶ್ ಕಡೆಗೆ ಹರಿಯುತ್ತದೆ(ಇಲ್ಲಿ ಈ ನದಿಗೆ ಶಾರದಾ ನದಿ ಎಂದು ಹೆಸರಿದೆ). ಜೌಲ್‍ಜಿಬಿಯಲ್ಲಿ ಗೊರಿ ಗಂಗಾ ನದಿಯೊಂದಿಗೆ ಸೇರುವ ಈ ನದಿಯು ಕಡೆಗೆ ಪವಿತ್ರ ಗಂಗಾ ನದಿಯೊಂದಿಗೆ ಸೇರುತ್ತದೆ. ಪ್ರವಾಸಿಗರು ಸವಾಲೆಸೆಯುವ ಕಾಳಿ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್‍ನ ಮೋಜನ್ನು ಅನುಭವಿಸಬಹುದು.


Click it and Unblock the Notifications