ಚಿರ್ಕಿಲ ಜಲಾಶಯವು ಒಂದು ಜಲವಿದ್ಯುತ್ ಸ್ಥಾವರವಾಗಿದೆ. ಇದು ಧಾರ್ಚೂಲಾದಿಂದ 20 ಕಿ.ಮೀ ದೂರದಲ್ಲಿದೆ. ಈ ಜಲಾಶಯವನ್ನು ಕಾಳಿ ನದಿಯ ದಂಡೆಯ ಮೇಲೆ ನಿರ್ಮಾಣ ಮಾಡಲಾಗಿದೆ. ಇದು ಸುಮಾರು 1500 ಕಿ.ವ್ಯಾ ವಿದ್ಯುತ್ತನ್ನು ಉತ್ಪಾದಿಸುತ್ತದೆ. ಪ್ರವಾಸಿಗರು ಈ ಜಲಾಶಯಕ್ಕೆ ಸಂಪರ್ಕ ಹೊಂದಿರುವ ಸುಂದರ ಕೆರೆಯನ್ನು ಇಲ್ಲಿ ಕಾಣಬಹುದು. ಈ ಸ್ಥಳವು ಪ್ರವಾಸಿಗರ ವಲಯದಲ್ಲಿ ಭಾರೀ ಜನಪ್ರಿಯ ವಿಹಾರ ತಾಣವಾಗಿದೆ.