Search
  • Follow NativePlanet
Share
ಮುಖಪುಟ » ಸ್ಥಳಗಳು » ಧಾರ್ಚೂಲಾ » ಹವಾಮಾನ

ಧಾರ್ಚೂಲಾ ಹವಾಮಾನ

ಬೇಸಿಗೆ ಮತ್ತು ಮಳೆಗಾಲಗಳು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾದ ಕಾಲವಲ್ಲ. ಏಕೆಂದರೆ ಆಗ ಇಲ್ಲಿ ಅಸೌಖ್ಯಕರವಾದ ಹವಾಮಾನವಿರುತ್ತದೆ. ಹಾಗಾಗಿ ಪ್ರವಾಸಿಗರು ಧಾರ್ಚೂಲಾಗೆ ಭೇಟಿ ನೀಡಲು ಬಯಸಿದರೆ ಚಳಿಗಾಲದಲ್ಲಿ ಭೇಟಿಕೊಡುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ತಿಂಗಳು ಇಲ್ಲಿ ಬೇಸಿಗೆಯ ಆರಂಭವಾಗಿ ಜೂನ್‍ವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 45° ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 30° ಡಿಗ್ರಿ ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್): ಧಾರ್ಚೂಲಾದಲ್ಲಿ ಮಳೆಗಾಲವನ್ನು ಜುಲೈನಿಂದ ಸೆಪ್ಟೆಂಬರ್ ಅವಧಿಯ ನಡುವೆ ಕಾಣಬಹುದು. ಈ ಸಮಯದಲ್ಲಿ ಇಲ್ಲಿ ಅತಿಯಾದ ಮಳೆಯು ಬೀಳುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲವು ಇಲ್ಲಿ ಡಿಸೆಂಬರ್ ನಲ್ಲಿ ಆರಂಭವಾಗಿ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಆಗ ಇಲ್ಲಿ ಅನುಕ್ರಮವಾಗಿ ಕನಿಷ್ಠ 5.5°ಸೆಲ್ಶಿಯಸ್ ಮತ್ತು ಗರಿಷ್ಠ 8° ಸೆಲ್ಶಿಯಸ್ ಉಷ್ಣಾಂಶವು ದಾಖಲಾಗುತ್ತದೆ.