Search
  • Follow NativePlanet
Share
ಮುಖಪುಟ » ಸ್ಥಳಗಳು » ಧಾರ್ಚೂಲಾ » ಆಕರ್ಷಣೆಗಳು » ಓಂ ಪರ್ವತ

ಓಂ ಪರ್ವತ, ಧಾರ್ಚೂಲಾ

2

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಒಂದಾಗಿರುವ ಓಂ ಪರ್ವತವು ಸಮುದ್ರ ಮಟ್ಟದಿಂದ 6191ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಪರ್ವತವೂ ಲಿಟಲ್ ಕೈಲಾಶ್, ಆದಿ ಕೈಲಾಶ್ ಮತ್ತು ಜೊಂಗ್ಲಿಂಗ್ ಕಾಂಗ್ ಪೀಕ್ ಎಂಬ ಹೆಸರುಗಳಿಂದಲೂ ಜನಪ್ರಿಯವಾಗಿದೆ. ಈ ಪರ್ವತದ ವಿಶೇಷವೆಂದರೆ ಇದರ ಮೇಲಿನ ಹಿಮದ ರಾಶಿಯು "ಓಂ" ಆಕಾರದಲ್ಲಿ ಶೇಖರಣೆಯಾಗಿರುತ್ತದೆ. ಆದ್ದರಿಂದ ಈ ಶೃಂಗವು ಹಿಂದು, ಬೌದ್ಧ ಮತ್ತು ಜೈನ ಸಮುದಾಯದ ಭಕ್ತರ ಪಾಲಿಗೆ ಮಹತ್ವವುಳ್ಳದ್ದಾಗಿದೆ.

ಭಾರತ - ಟಿಬೇಟ್ ಗಳ ಸರಹದ್ದಿನಲ್ಲಿ ನೆಲೆಸಿರುವ ಈ ಪರ್ವತವು ಅನ್ನಪೂರ್ಣಾ ಹಿಮಚ್ಛಾದಿತ ಶಿಖರಗಳ ಅತ್ಯದ್ಭುತ ನೋಟವನ್ನು ಒದಗಿಸುತ್ತದೆ. ಈ ಆದಿ ಕೈಲಾಸದ ಯಾತ್ರೆಗುಂಟ ಪ್ರವಾಸಿಗರು ಕಾಳಿ ನದಿ, ಜಲಪಾತಗಳು, ದಟ್ಟ ಕಾಡುಗಳು ಮತ್ತು ನಾರಾಯಣ ಆಶ್ರಮಗಳ ವಿಹಂಗಮ ದೃಶ್ಯಗಳನ್ನು ಸವಿಯಬಹುದು. ಈ ಪರ್ವತದ ಬುಡದಲ್ಲಿ ಸ್ಥಿತಗೊಂಡಿರುವ ಗೌರಿಕುಂಡ ಕೆರೆಯು, ಪರ್ವತದ ಮನಮೋಹಕ ಪ್ರತಿಬಿಂಬವನ್ನು ಬಿತ್ತರಿಸಿರುವುದಕ್ಕೆ ಹೆಸರುವಾಸಿಯಾಗಿದೆ.

ಸಾಹಸಪ್ರಿಯರು ಈ ಪ್ರದೇಶದಲ್ಲಿ ಚಾರಣವನ್ನು ಕೈಗೊಳ್ಳಬಹುದಾಗಿದೆ. ಚಾರಣದ ಪ್ರಾರಂಭ ಮತ್ತು ಅಂತ್ಯದ ಸ್ಥಳ ತವಾಘಾಟ್, ಇದು ಕಾಳಿ ಹಾಗು ಧೌಲಾ ನದಿಗಳ ಸಂಗಮ ಸ್ಥಳವಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಇಲ್ಲಿರುವ ಜಾಂಗ್ ಲಿಂಗ್ ಕಾಂಗ್ ಕೆರೆಗೂ ಭೇಟಿ ನೀಡಬಹುದಾಗಿದೆ. ಇದನ್ನು ಮಾನಸ ಸರೋವರದಷ್ಟೆ ಪವಿತ್ರವಾದುದೆಂದು ಭಾವಿಸಲಾಗಿದೆ. ಇಲ್ಲಿಂದ ಹಿಮಚ್ಛಾದಿತ ಪಾರ್ವತಿ ಮುಹರ್ ನ ಪರ್ವತಗಳನ್ನೂ ನೋಡಬಹುದಾಗಿದ್ದು, ದಿನದ ಸಮಯದಲ್ಲಿ ಇವು ಸೂರ್ಯನ ಜೊತೆ ಸುಮಧುರ ದೃಶ್ಯಾವಳಿಗಳನ್ನು ಒದಗಿಸುತ್ತವೆ.

 

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue