Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಷ್ಟ್ರೀಯ ವಸ್ತು ಸಂಗ್ರಹಾಲಯ

ರಾಷ್ಟ್ರೀಯ ವಸ್ತು ಸಂಗ್ರಹಾಲಯ, ದೆಹಲಿ

4

ದೆಹಲಿಯಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ದೇಶದ ಅತಿ ದೊಡ್ಡ ಸಂಪುಟಗಳಲ್ಲಿ ಒಂದಾಗಿದೆ. 1947ರಲ್ಲಿ ದೆಹಲಿಯ ಪುನರ್ರಚನೆಯ ನಂತರ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕುತೂಹಲಕಾರಿ ಹಸ್ತಕೃತಿಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಸಚಿವಾಲಯದ ಸಂಸ್ಕೃತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇದು ಮೌಲಾನಾ ಆಜಾದ್ ರಸ್ತೆ ಮತ್ತು ಜನಪಥ್ ಮಾರ್ಗದಲ್ಲಿದೆ. ಇಲ್ಲಿ ಪೂರ್ವ ಐತಿಹಾಸಿಕ ಕಾಲದಿಂದ ಆಧುನಿಕ ಕಲೆಗಳ ವರೆಗಿನ ಎಲ್ಲ ರೀತಿಯ ಕಲೆಗಳ ಕಲಾಕೃತಿಗಳನ್ನು ಕಾಣಬಹುದು.

ಇತಿಹಾಸದ ಒಂದು ನೋಟ ..

ಇದರ ನಡಿಗೆಯು 1947-48 ರ ಲಂಡನ್ನಿನಲ್ಲಿ ನಡೆದ ಭಾರತೀಯ ಕಲಾಕೃತಿಗಳ ಪ್ರದರ್ಶನದೊಂದಿಗೆ ಆರಂಭವಾಯಿತು. ರಾಯಲ್ ಅಕಾಡೆಮಿಯಲ್ಲಿ ಈ ಪ್ರದರ್ಶನದ ಆಯೋಜಕರು ಪ್ರದರ್ಶನಕ್ಕಿಂತ ಮೊದಲು ಎಲ್ಲಾ ಪ್ರದರ್ಶನದ ವಸ್ತುಗಳನ್ನು ತಮ್ಮ ಮೂಲ ವಸ್ತು ಸಂಗ್ರಹಾಲಯಕ್ಕೆ ಕಳುಹಿಸುವ ಮುನ್ನ ಭಾರತದಲ್ಲಿ ಆಯೋಜಿಸಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಈ ಎಲ್ಲಾ ವಸ್ತುಗಳು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶಿಸಲಾಯಿತು. ಇದು ಹಲವಾರು ಕಲಾಭಿಜ್ಞರನ್ನು ಆಕರ್ಷಿಸಿತು. ಇದರ ಪರಿಣಾಮವಾಗಿ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಅದೇ ವರ್ಷ ದೆಹಲಿಯಲ್ಲಿ ಸ್ಥಾಪಿಸಿದರು. ಇದನ್ನು ಅಂದಿನ ರಾಜ್ಯಪಾಲ ಚಕ್ರವರ್ತಿ ರಾಜಗೋಪಾಲಾಚಾರಿ ಉದ್ಘಾಟಿಸಿದರು. ಆದರೆ, ಇಂದಿನ ಸಂಗ್ರಹಾಲಯದ ಕಟ್ಟಡ ಅಸ್ತಿತ್ವಕ್ಕೆ ಬಂದಿದ್ದು 1960 ರಲ್ಲಿ. ಅಲ್ಲಿಂದ ಈಚೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಸಂಗ್ರಹಗಳು :

ಈ ವಸ್ತು ಸಂಗ್ರಹಾಲಯವು ಇಂದು, ಭಾರತೀಯ ಹಾಗೂ ವಿದೇಶಿಯ ಎರಡೂ ಮೂಲದ 200,000 ಕಲಾ ತುಣುಕುಗಳನ್ನೊಳಗೊಂಡ ಮ್ಯೂಸಿಯಂ ಆಗಿದೆ. ಇಲ್ಲಿರುವ ಮಣ್ಣು ಮತ್ತು ಕಂಚಿನ ಪ್ರದರ್ಶನಗಳು, ನಮ್ಮನ್ನು ಕ್ರಿ.ಪೂ 2700 ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಮೌರ್ಯ ಕಾಲದ ಮರದ ವಾಸ್ತುಶಿಲ್ಪಗಳು, ದಕ್ಷಿಣ ಭಾರತದ ವಿಜಯನಗರ ಕಲೆಯ ತುಣುಕುಗಳು, ಗುಪ್ತರ ಕಾಲವನ್ನು ಪ್ರತಿನಿಧಿಸುವ ಕಲಾಕೃತಿಗಳು, ಸಿಂಧೂ ಕಣಿವೆ ನಾಗರೀಕತೆ, ಮೊಘಲರ ಯುಗ, ಗಂಧರ್ವ ಅವಧಿ ಮತ್ತು ಇನ್ನೂ ಹಲವು ವಿಷಯಗಳನ್ನು ನಮ್ಮ ಕಣ್ಮುಂದೆ ತರುತ್ತವೆ.

ಜೊತೆಗೆ ಈ ವಸ್ತು ಸಂಗ್ರಹಾಲಯದಲ್ಲಿ ಬುದ್ಧನ ವಿವಿಧ ಭಾಗಗಳನ್ನು, ಒಳಗೊಂಡಿರುವ ಪ್ರತ್ಯೇಕ ಬೌದ್ಧ ಕಲಾ ವಿಭಾಗವನ್ನೂ ಕಾಣಬಹುದು. ಇವು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಪತ್ತೆಯಾದ ವಸ್ತುಗಳನ್ನು ಹೊಂದಿದೆ.

ಇನ್ನಿತರ ಆಕರ್ಷಣೀಯ ಪ್ರದರ್ಶನಗಳೆಂದರೆ, ಮೆಹೆಂಜೋದಾರೋ ನೃತ್ಯ ಭಂಗಿಯ ಮೂರ್ತಿಗಳು, ಬುಡಕಟ್ಟು ಜನಾಂಗದ ಆಭರಣಗಳು, ವರ್ಣರಂಜಿತ / ಚಿಕಣಿ ಕಲೆ ತುಣುಕುಗಳು, ಭಿತ್ತಿಚಿತ್ರ/ಮ್ಯೂರಲ್ ವರ್ಣಚಿತ್ರಗಳು, ವಸ್ತ್ರಗಳು, ಸಂಗೀತ ಉಪಕರಣ, ಶಸ್ತ್ರಾಸ್ತ್ರಗಳು ಮತ್ತು ಪ್ರಸಿದ್ಧ ಮೊಘಲ್ ಚಕ್ರವರ್ತಿ ಜಹಾಂಗೀರ್ ಸಹಿ ಮಾಡಿದ ಕೆಲವು ಅತ್ಯಂತ ಪ್ರಭಾವಶಾಲಿಯಾದ ಸ್ಮಾರಕಗಳು ಕೂಡಾ ಇಲ್ಲಿವೆ.

ಸಾಮಾನ್ಯವಾಗಿ ಒಳಗೊಂಡಿರುವ ಸಂಗ್ರಹಣೆ ವರ್ಗೀಕರಣಗಳೆಂದರೆ, ವರ್ಣಚಿತ್ರಗಳು, ಆಭರಣ, ಪುರಾತತ್ತ್ವ ಶಾಸ್ತ್ರ, ಹಸ್ತಪ್ರತಿಗಳು, ಶಸ್ತ್ರಾಸ್ತ್ರ  ಗುರಾಣಿ ಮತ್ತು ಇನ್ನೂ ಹೆಚ್ಚಿನ ವಸ್ತುಗಳು. ಮೂರು ದೊಡ್ಡ ಮಹಡಿಗಳನ್ನು ವ್ಯಾಪಿಸಿಸಿರುವ ಈ ಸುಂದರ ವಸ್ತು ಸಂಗ್ರಹಾಲಯದ ಒಳಗೆ ಸಂಗ್ರಹಿಸಲಾದ ವಸ್ತುಗಳನ್ನು  ವೀಕ್ಷಿಸಲು ಬಹುಶಃ ಒಂದೇ ದಿನ ಸಾಕಾಗಲಾರದು.

ಈ ವಸ್ತು ಸಂಗ್ರಹಾಲಯವು ಪ್ರೇಕ್ಷಕರ ವೀಕ್ಷಣೆಗಾಗಿ, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಹಾಗೂ ವಾರದಲ್ಲಿ ಸೋಮವಾರ ಮಾತ್ರ ರಜೆಯಿರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu