Search
 • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕುತುಬ್ ಕಾಂಪ್ಲೆಕ್ಸ್ (ಸಂಕೀರ್ಣ)

ಕುತುಬ್ ಕಾಂಪ್ಲೆಕ್ಸ್ (ಸಂಕೀರ್ಣ), ದೆಹಲಿ

7

ದೆಹಲಿಯ ಮೆಹ್ರೌಲಿಯಲ್ಲಿರುವ ಸಂಕೀರ್ಣ, ಕುತುಬ್ ಕಾಂಪ್ಲೆಕ್ಸ್ ದೆಹಲಿಯ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ಕುತುಬ್ ಮಿನಾರ್ ಮತ್ತು ಇನ್ನೂ ಅನೇಕ ಶ್ರೇಷ್ಠ ಐತಿಹಾಸಿಕ ಸ್ಮಾರಕಗಳ ನೆಲೆಯಾಗಿದೆ. UNESCO ನಿಂದ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲಾಗಿದ್ದು, ಇಲ್ಲಿ ಗುಲಾಮ ಸಾಮ್ರಾಜ್ಯದ ಅನೇಕ ರಚನೆಗಳನ್ನು ಕಾಣಬಹುದು. ಈ ಸ್ಥಳವನ್ನು ಉತ್ತಮವಾಗಿ ನಿರ್ವಹಿಸಲಾಗಿದ್ದು, ದೆಹಲಿಯ ಪ್ರಮುಖ ಪ್ರವಾಸಿ ತಾಣ ಹಾಗೂ ಪಿಕ್ನಿಕ್ ಸ್ಥಳವೆನಿಸಿದೆ. ಇದರೊಳಗೆ ಆಸಕ್ತಿದಾಯಕ ಹಲವಾರು ಸ್ಮಾರಕಗಳಿವೆ. 

ಕುತುಬ್ ಮಿನಾರ್ : ಇದು ಈ ಸಂಕೀರ್ಣದಲ್ಲಿರುವ ಪ್ರಸಿದ್ಧ ರಚನೆಯಾಗಿದೆ. UNESCO ವಿಶ್ವ ಪರಂಪರೆಯ ದೇಶದ ಅತಿ ಎತ್ತರದ ಗೋಪುರವಾಗಿದ್ದು 72.5 ಮೀಟರ್ ಎತ್ತರದಲ್ಲಿದೆ. ಕುತುಬ್ ಮಿನಾರ್ 1193 ಮತ್ತು 1368 ಅವಧಿಯಲ್ಲಿ ಕುತುಬ್-ಉದ್-ದಿನ್-ಐಬಕ್ ನಿರ್ಮಿಸಿದ ವಿಜಯದ ಗೋಪುರವಾಗಿದೆ. ಇದನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸುಲಾಗುತ್ತಿದೆ, ಇದು ಒಂದು ವಾಸ್ತುಶಿಲ್ಪದ ಅದ್ಭುತ ಮತ್ತು ಭಾರತದಲ್ಲಿ ನೋಡಲೇಬೇಕಾದ ರಚನೆಯಾಗಿದೆ.   

ಕಬ್ಬಿಣದ ಕಂಬ (ಐರನ್ ಪಿಲ್ಲರ್) : ನೀವು ಭಾರತದಲ್ಲಿ ತುಕ್ಕು ನಿರೋಧಕ ಕಬ್ಬಿಣ ಕಂಬ ಎಂಬುದರ ಬಗ್ಗೆ ಕೇಳಿರಬಹುದು, ಈ ಕಬ್ಬಿಣದ ಕಂಬವು ಕುತುಬ್ ಸಂಕೀರ್ಣದಲ್ಲಿಯೇ ಇದೆ! ಏಳು ಮೀಟರ್ ಎತ್ತರದ ಈ ಕಂಬವನ್ನು ಕ್ರಿ.ಶ 400 ರ ಸಮಯದಲ್ಲಿ ಚಂದ್ರಗುಪ್ತ ಸಾಮ್ರಾಜ್ಯದ ಎರಡನೇ ವಿಕ್ರಮಾದಿತ್ಯ ನಿರ್ಮಿಸಿದ ಎನ್ನಲಾಗಿದೆ. ಇದನ್ನು ಲೋಹವಿಜ್ಞಾನಿಗಳು, ತುಕ್ಕು ರಹಿತ ಲೋಹವನ್ನು ಬಳಸಿ ವಿಸ್ಮಯಕಾರಿಯಾಗಿ ನಿರ್ಮಿಸಿದರು ಮತ್ತು ಇದು ದೆಹಲಿಯ ಕಠಿಣ ಹವಾಮಾನವನ್ನು ಎದುರಿಸಿ ಈಗಲೂ ಗಟ್ಟಿಯಾಗಿ ನಿಂತಿದೆ.

ಅಲ್-ಐ-ಮಿನಾರ್: ಈ ಗೋಪುರವನ್ನು ಅಲಾ ಐಬಕ್-ಖಿಲ್ಜಿ ಕುತುಬ್ ಮಿನಾರ್ಗಿಂತ ಎತ್ತರದಲ್ಲಿ ನಿರ್ಮಿಸಲು ನಿರ್ಧರಿಸಿದ್ದನು. ಆದರೆ ಈ ಗೋಪುರವು 25.4 ಮೀಟರ್ ಎತ್ತರದ ವರೆಗೆ ಕಟ್ಟುತ್ತಿದ್ದಂತೆ ಖಿಲ್ಜಿ ಸಾವನಪ್ಪಿದ್ದರಿಂದ ಈ ಗೋಪುರದ ನಿರ್ಮಾಣ ಅಪೂರ್ಣಗೊಂಡಿತು. ಅಪೂರ್ಣವಾದ ಅಲ್-ಐ-ಮಿನಾರ್ ಈ ಸಂಕೀರ್ಣದಲ್ಲಿಯೇ ಇದೆ. 

ಅಲ್-ಐ-ದರ್ವಾಜಾ (ಅಲೈ ದರ್ವಾಜಾ): ಇದೊಂದು ಸಣ್ಣ ಚೌಕಾಕಾರದ ಸಮಾಧಿ ಕಟ್ಟಡವಾಗಿದ್ದು ಕುವೈತ್-ಉಲ್-ಇಸ್ಲಾಂ ಮಸೀದಿಯ ಪ್ರವೇಶದ್ವಾರವಾಗಿದೆ. ಇದು ಕುತುಬ್ ಸಂಕೀರ್ಣದಲ್ಲಿಯೇ ಇದೆ. ಈ ರಚನೆ ಕುತುಬ್ ಮಿನಾರ್ ನ ಹಿಂಭಾಗದಲ್ಲಿದ್ದು ಸುಂದರವಾಗಿ ಕೆತ್ತಿದ ಕಲ್ಲಿನ ಪರದೆಗಳು ಮತ್ತು ಅಮೃತಶಿಲೆಯ ಅಲಂಕಾರಗಳನ್ನು ಹೊಂದಿದ್ದು ಆಕರ್ಷಣೀಯ ಸ್ಥಳವಾಗಿದೆ.

ಕು/ಕ್ಯುವತ್-ಉಲ್-ಇಸ್ಲಾಂ ಮಸೀದಿ : ಕುತುಬ್ ಸಂಕೀರ್ಣದ ಒಳಗಿರುವ ಈ ಮಸೀದಿ ದೆಹಲಿಯ ಅತ್ಯಂತ ಹಳೆಯ ಮಸೀದಿ ಎನಿಸಿದೆ. ಆದರೆ ಇದೀಗ ಬಹುತೇಕ ಹಾಳಾಗಿದ್ದು, ಕಟ್ಟಡದ ಭಾಗಗಳು ಮತ್ತು ಸುಂದರ ಅಲಂಕಾರಗಳು ಮತ್ತು ಕೆತ್ತನೆಗಳು ಜಟಿಲ ಸ್ಥಿತಿಯಲ್ಲಿವೆ.

ಇಮಾಮ್ ಝಮೀನ್ ಸಮಾಧಿ: ಕುತುಬ್ ಸಂಕೀರ್ಣದಲ್ಲಿರುವ ಈ ಸಮಾಧಿಯನ್ನು ತುರ್ಕಿಸ್ತಾನಿ ಇಮಾನ್ ಗೆ ಸಮರ್ಪಿಸಲಾಗಿದ್ದು ಸಿಕಂದರ್ ಲೋದಿ ಆಳ್ವಿಕೆ ಸಂದರ್ಭದಲ್ಲಿ ನಿರ್ಮಿಸಲಾಗಿದೆ. ಇದನ್ನು ಈಗ ಅಲ್-ಐ-ದರ್ವಾಜಾ ದ ನಂತರದಲ್ಲಿ (ಪಕ್ಕದಲ್ಲಿ) ಕಾಣಬಹುದು.

ಲ್ತುಮಿಶ್ ಸಮಾಧಿ : ಸಂಕೀರ್ಣದ ಒಳಗಿರುವ ಈ ಸಮಾದಿ ಗುಲಾಮಿ ರಾಜವಂಶದ ದೊರೆ ಲ್ತುಮಿಶ್ ನದ್ದು. ಈ ಸ್ಮಾರಕವನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ ಮತ್ತು ಕೋಣೆಯ ಹೃದಯ ಭಾಗದಲ್ಲಿ ಒಂದು ಎತ್ತರದ ವೇದಿಕೆಯ ಮೇಲೆ ಇದೆ. ಈ ಸ್ಮಾರಕವು ಸುಂದರ ಕೆತ್ತನೆಗೆ ಹೆಸರುವಾಸಿಯಾಗಿದೆ.

ಸುಲ್ತಾನ್ ಘರಿ : ಸುಲ್ತಾನ್ ಘರಿ ಇಸ್ಲಾಂಮಿಕ್ ಸಮಾಧಿಯಾಗಿದ್ದು, ಲ್ತುಮಿಶ್ ನ ಹಿರಿಯ ಮಗ ನಾಸಿರಿದ್ಧೀನ್ ಮಹಮ್ಮದ್ ನ ಸಮಾಧಿಯಾಗಿದೆ. ಕ್ರಿ.ಶ 1231 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಇದು ಮಧ್ಯಕಾಲೀನ ದೆಹಲಿಯ ಗುಲಾಮಿ ಸಾಮ್ರಾಜ್ಯದ ಭಾಗವಾಗಿತ್ತು. ಆದರೆ ಈ ಭಾಗವು ಕುತುಬ್ ಸಂಕೀರ್ಣಕ್ಕೆ ಸೇರಿದೆ. ಇದೊಂದು ಅಸಮಾನ್ಯ ರಚನೆಯಾಗಿದ್ದು ಕೋಟೆಯ ಆವರಣವನ್ನು ಹೊಂದಿದೆ. ಇದು ಉಳಿದ ಗೋರಿಗಳಿಗಿಂತ ವಿಭಿನ್ನವಾಗಿದ್ದು ಮುಸ್ಲಿಂ ರಿಗೆ ಮಾತ್ರವಲ್ಲದೆ ಹಿಂದೂಗಳ ನಡುವೆಯೂ ಜನಪ್ರಿಯತೆಗಳಿಸಿದೆ. ಈ ಪಾರಂಪರಿಕ ರಚನೆಯು ಭಾರತದ ಪುರಾತತ್ವ ಇಲಾಖೆಗಿಂತ ಚೆನ್ನಾಗಿ ಭಕ್ತಾದಿಗಳಿಂದ ನಿರ್ವಹಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
01 Oct,Thu
Return On
02 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Oct,Thu
Check Out
02 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Oct,Thu
Return On
02 Oct,Fri
 • Today
  Delhi
  33 OC
  91 OF
  UV Index: 10
  Haze
 • Tomorrow
  Delhi
  34 OC
  94 OF
  UV Index: 10
  Sunny
 • Day After
  Delhi
  34 OC
  93 OF
  UV Index: 10
  Sunny