ಪರಿಸರ ಪ್ರೇಮಿಗಳಿಗೆ ಇದು ಹೇಳಿ ಮಾಡಿಸಿದ ತಾಣ ಖಜ್ಜರ್. ಕಾಲಾತೋಪ್‌ನಿಂದ ಹೊರಟ ಮೂರು ದಿನದ ನಂತರ ಇಲ್ಲಿಗೆ ತಲುಪಬಹುದು. ಇಲ್ಲಿನ ನೋಟ ಮೂರು ದಿನದ ಪ್ರಯಾಣದ ಆಯಾಸ ಮರೆಸುತ್ತದೆ. ಕುದುರೆ ಸವಾರಿ, ಛಾಯಾಗ್ರಹಣ ಸೇರಿದಂತೆ ಹಲವು ಚಟುವಟಿಕೆಗೆ ಇದು ಸೂಕ್ತ ತಾಣ. ಸಾಹಸ ಕ್ರೀಡೆಗಂತೂ ವಿಶಿಷ್ಟವಾಗಿದೆ. ಭಾರಿ ಪ್ರಮಾಣದಲ್ಲಿ ಹಿಮ ಬೀಳುವುದರಿಂದ ಇಲ್ಲಿನ ಸೇತುವೆ, ತೊರೆಗಳು ಆಕರ್ಷಕ ನೋಟ ನೀಡುತ್ತವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ದಪ್ಪವಾದ ಉಲ್ಲನ್ ಬಟ್ಟೆಯನ್ನು ತರಲು ಬೇಸಿಗೆಯಲ್ಲೂ ಸೂಚಿಸಲಾಗುತ್ತದೆ. ಅಷ್ಟು ಚಳಿ ಇಲ್ಲಿರುತ್ತದೆ.


Click it and Unblock the Notifications