ಕಟಕ್ ನಿಂದ ಸುಮಾರು 136 ಕಿ.ಮೀ. ದೂರದಲ್ಲಿ ಸತಕೋಸಿಯಾ ಗಾರ್ಜ್ ವನ್ಯಜೀವಿ ಧಾಮ ಇದೆ. ಸತಕೋಸಿಯಾ ಬಾಸಿಪಲ್ಲಿ ಧಾಮ ಎಂತಲೂ ಕರೆಯುತ್ತಾರೆ. 1976ರಲ್ಲಿ ಒರಿಸ್ಸಾದಲ್ಲಿ ಇದನ್ನು ಸ್ಥಾಪಿಸಲಾಯಿತು. ಈ ಧಾಮ ಸುಮಾರು 796 ಚದರ ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿದೆ. ಮಹಾನದಿಯ ತಟದಲ್ಲಿ ಈ ಧಾಮ ನೆಲೆಗೊಂಡಿದೆ. ಪರಿಸರ ಪ್ರೇಮಿಗಳಿಗೆ ಈ ಧಾಮ ಹೇಳಿ ಮಾಡಿಸಿದಂತಿದೆ. ಮಹಾನದಿ ನದಿಯಿಂದ ರೂಪಿತಗೊಂಡ ಕಣಿವೆಯಲ್ಲಿ ಈ ಧಾಮ ಸಮೃದ್ಧ ಸಸ್ಯರಾಶಿ ಹಾಗು ವನ್ಯಜೀವಿಗಳಿಗೆ ನೆಲೆವೀಡಾಗಿದೆ.
ದಟ್ಟವಾದ ಉದುರೆಲೆ ಅರಣ್ಯ ಮತ್ತು ಸಾಲ್ ಮರಗಳಿರುವ ಕಾಡಿನಲ್ಲಿ ಕಾಡು ಹುಲಿ, ಆನೆ, ಇಲಿ ಜಿಂಕೆ, ಕಾಡೆಮ್ಮೆ, ನೀಲಗಾಯ್, ಕೃಷ್ಣಮೃಗ, ಸಾಂಬಾರ್, ಸ್ಲಾತ್ ಬೇರ್, ಸ್ಪಾಟೆಡ್ ಜಿಂಕೆ, ಚಿರತೆ ಮುಂತಾದ ವಿವಿಧ ಬಗೆಯ ಪ್ರಾಣಿಗಳನ್ನು, ಸರೀಸೃಪ, ಸಿಹಿನೀರ ಆಮೆಗಳು, ವಿಷಪೂರಿತ ಹಾಗು ವಿಷವಿಲ್ಲದ ಹಾವುಗಳನ್ನು ಕಾಣಬಹುದು. ಈ ಧಾಮದೊಳಗೆ ಚಾರಣಿಗರಿಗೆ ಅನುಮತಿ ಇರುವುದರಿಂದ ಇದು ಸಾಹಸಿಗರಿಗೆ ಮತ್ತೊಂದು ಆಕರ್ಷಣೆಯಾಗಿದೆ.


Click it and Unblock the Notifications