ಧಾಬಳೇಶ್ವರ ಬೀಚ್ ಗೆ ಜಲಪ್ರವಾಸ ಕೈಗೊಂಡರೆ ಕಟಕ್ ನಿಂದ 4 ಕಿ.ಮೀ. ದೂರದಲ್ಲಿದೆ. ಇಲ್ಲದಿದ್ದರೆ ರಸ್ತೆ ಮಾರ್ಗವಾಗಿ ಹೋದರೆ 12 ಕಿ.ಮೀ. ಆಗುತ್ತದೆ. ಧಾಬಳೇಶ್ವರ ಮಹಾನದಿಯ ದಡದ ಮೇಲೆ ಉಪಸ್ಥಿತವಿರುವ ಭವ್ಯವಾದ ದ್ವೀಪ. ಸ್ತಬ್ಧ ಮತ್ತು ಪ್ರಶಾಂತವಾದ ವಾತಾವರಣವೇ ಈ ಬೀಚ್ ನ ವೈಶಿಷ್ಟ್ಯತೆಯಾಗಿದೆ. ಹಾಗೆಯೆ, ಸಾಹಸಿಗರಿಗೂ ಇದು ಹೇಳಿ ಮಾಡಿಸಿದ ತಾಣವಾಗಿದೆ.
ಮಹಾದೇವನಾದ ಶಿವನಿಂದ ಈ ಧಾಬಳೇಶ್ವರವೆಂಬ ಪದ ಹುಟ್ಟಿಕೊಂಡಿದೆ. ಇಲ್ಲಿಯ ಜನ ಭಗವಾನ್ ಧಾಬಳೇಶ್ವರ ಎಂದು ಕರೆಯುತ್ತಾರೆ. ಇಲ್ಲಿಯ ಏಕಾಂತ ವಾತಾವರಣ, ವಿಶ್ರಮಿಸಿಕೊಳ್ಳಲು ಇರುವ ಸ್ಥಳ ಸೆಳೆಯುತ್ತದೆ. ಸಮೀಪದಲ್ಲಿರುವ ಧಾಬಳೇಶ್ವರ ಮಂದಿರ 11ನೇ ಶತಮಾನದ್ದಾಗಿದ್ದು ವರ್ಷವಿಡೀ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುತ್ತದೆ. ಭಾರತದಿಂದ ಹಾಗು ವಿದೇಶದಿಂದಲೂ ಜನರು ಇಲ್ಲಿಗೆ ಬರುತ್ತಿರುತ್ತಾರೆ.


Click it and Unblock the Notifications