Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ತಲಕಾವೇರಿ

ತಲಕಾವೇರಿ, ಕೊಡಗು

8

ಹಿಂದೂಗಳಿಗೆ ತಲಕಾವೇರಿಯು ಪವಿತ್ರ ಯಾತ್ರಾಸ್ಥಳ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಇದು ಕಾವೇರಿಯ ಮೂಲ ಎಂದ ಪರಿಗಣಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 1276 ಮೀಟರು ಎತ್ತರದಲ್ಲಿದೆ. ಸದ್ಯ ಇಲ್ಲೊಂದು ಕೆರೆಯಿದ್ದು, ಇಲ್ಲಿ ಕಾವೇರಿಯ ಜನ್ಮವಾಗಿದೆ ಎಂದು ನಂಬಲಾಗಿದೆ. ನದಿಯಿಂದ ಕೆರೆಗೆ ನೀರು ಹರಿಯುತ್ತದೆ. ನಂತರದಲ್ಲಿ ನೀರು ಕೆಳಗೆ ಹರಿದು ಸ್ವಲ್ಪ ದೂರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ಕೆರೆಯಲ್ಲಿ ವಿಶೇಷ ದಿನಗಳಲ್ಲಿ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ. ಇದಕ್ಕೆ ಸಮೀಪದಲ್ಲಿ ಅಗಸ್ತೀಶ್ವರನಿಗೆ ಅರ್ಪಿಸಿದ ಒಂದು ದೇವಸ್ಥಾನ ಕೂಡಾ ಇದೆ. ಇಲ್ಲಿಗೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಒಂದು ಕಥೆಯೂ ಜನಜನಿತ. ಅಗಸ್ತ್ಯ ಋಷಿಯು ತನ್ನ ಕಮಂಡಲದಿಂದ ಕಾವೇರಿಯನ್ನು ಹಿಡಿದಿಟ್ಟಿದ್ದರು. ಕಾಗೆಯ ರೂಪದಲ್ಲಿ ಬಂದ ಗಣೇಶನು ಕಮಂಡಲವನ್ನು, ಅಗಸ್ತ್ಯ ಋಷಿಯು ತಪಸ್ಸು ಮಾಡುತ್ತಿದ್ದಾಗ ಬೆಟ್ಟದ ಮೇಲಿನಿಂದ ಬೀಳಿಸುತ್ತಾನೆ. ತಲಕಾವೇರಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಬರುತ್ತದೆ ಎಂದು ಜನ ನಂಬಿದ್ದಾರೆ ಮತ್ತು ಎಲ್ಲಾ ರೋಗಗಳಿಂದ ಮುಕ್ತಿ ನೀಡುತ್ತದೆ ಎಂದು ನಂಬಲಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಭಾಗಮಂಡಲ. ಇಲ್ಲಿ ಮೂರು ನದಿಗಳಾದ ಕಾವೇರಿ, ಕನಕೆ ಮತ್ತು ಸುಜ್ಯೋತಿ ನದಿಯು ಒಟ್ಟು ಸೇರುತ್ತವೆ. ಭಾಗಮಂಡಲು ತಲಕಾವೇರಿಯಿಂದ ೮ ಕಿ.ಮೀ ದೂರದಲ್ಲಿದೆ. ಇದಕ್ಕೆ ಸಮೀಪದಲ್ಲಿ ಗಣಪತಿ, ಸುಬ್ರಹ್ಮಣ್ಯ ಮತ್ತು ವಿಷ್ಣುವಿಗೆ ಅರ್ಪಿಸಲಾದ ದೇವಸ್ಥಾನವಿದೆ. ಅಕ್ಟೋಬರ್/ನವೆಂಬರ್‌ನಲ್ಲಿ ವಾರ್ಷಿಕ ಹಬ್ಬವೊಂದು ಆಚರಿಸಲ್ಪಡುತ್ತದೆ. ಈ ಸಂದರ್ಭದಲ್ಲಿ ನದಿಯು ವೇಗವಾಗಿ ಹರಿಯುತ್ತದೆ ಮತ್ತು ಸಾವಿರಾರು ಭಕ್ತಾದಿಗಳು ಈ ಹಬ್ಬಕ್ಕೆ ಸಾಕ್ಷಿಯಾಗುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಸಾವಿರಾರು ದೀಪಗಳು ಬೆಳಗುವ ಮೂಲಕ ಸುಂದರವಾಗಿ ಕಾಣುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri