Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಇರುಪ್ಪು ಜಲಪಾತ

ಇರುಪ್ಪು ಜಲಪಾತ, ಕೊಡಗು

3

ಇರುಪ್ಪು ಜಲಪಾತವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ಘಟ್ಟ ಪ್ರದೇಶದಲ್ಲಿದೆ. ಬ್ರಹ್ಮಗಿರಿ ಅಭಯಾರಣ್ಯದ ಒಂದು ಬದಿಯಲ್ಲಿ ಈ ಇರುಪ್ಪು ಜಲಪಾತವಿದೆ. ಇದನ್ನು ಲಕ್ಷ್ಮಣ ತೀರ್ಥ ಎಂದು ಕೂಡಾ ಕರೆಯಲಾಗುತ್ತದೆ. ಈ ಲಕ್ಷ್ಮಣ ತೀರ್ಥ ನದಿಯು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ನದಿಯು ಸುಮಾರು 60 ಅಡಿಯಷ್ಟು ದೂರಕ್ಕೆ ಹರಿಯುತ್ತದೆ, ಇದನ್ನು ಇರುಪ್ಪು ಜಲಪಾತ ಎನ್ನಲಾಗುತ್ತದೆ. ವಿರಾಜಪೇಟೆಯಿಂದ ಸುಮಾರು 48 ಕಿ.ಮೀ ದೂರದಲ್ಲಿ ಮತ್ತು ಮಡಿಕೇರಿಯಿಂದ ಸುಮಾರು 80 ಕಿ.ಮೀ ದೂರದಲ್ಲಿ ನಾಗರಹೊಳೆ ದಾರಿಯಲ್ಲಿದೆ. ಕೇರಳದ ವಯನಾಡು ಜಿಲ್ಲೆಗೆ ತುಂಬಾ ಹತ್ತಿರದಲ್ಲಿದೆ. ಪ್ರಸಿದ್ಧ ರಾಮೇಶ್ವರ ದೇವಸ್ಥಾನವು ಜಲಪಾತಕ್ಕೆ ತುಂಬಾ ಸಮೀಪದಲ್ಲಿದೆ. ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಇಲ್ಲಿಗೆ ಬಂದಿದ್ದರು ಮತ್ತು ರಾಮನು ಲಕ್ಷ್ಮಣನನ್ನು ನೀರು ತರುವುದಕ್ಕೆ ಹೇಳಿದ. ಅಣ್ಣನ ಆಜ್ಞೆಯಂತೆ ನೀರಡಿಕೆ ತಣಿಸುವುದಕ್ಕಾಗಿ ಲಕ್ಷ್ಮಣನು ಒಂದು ಬಾಣವನ್ನು ಬ್ರಹ್ಮಗಿರಿ ಗುಡ್ಡಕ್ಕೆ ಹೊಡೆದ. ಇಲ್ಲಿ ಹರಿದ ನೀರನ್ನೇ ಲಕ್ಷ್ಮಣ ತೀರ್ಥ ಎನ್ನಲಾಗುತ್ತದೆ. ಮಹಾಶಿವರಾತ್ರಿಯಂದು ಇಲ್ಲಿಗೆ ಭೇಟಿ ನೀಡಿದರೆ ಪಾಪವೆಲ್ಲಾ ತೊಳೆದುಹೋಗುತ್ತದೆ ಎಂದು ಭಕ್ತರು ನಂಬುತ್ತಾರೆ. ಪಶ್ಚಿಮ ಘಟ್ಟದ ಎಲ್ಲಾ ಜಲಪಾತಗಳಂತೆಯೇ ಇರುಪ್ಪು ಜಲಪಾತವೂ ಕೂಡಾ ಬೇಸಿಗೆಗೆ ಹೋಲಿಸಿದರೆ ಮಳೆಗಾಲದಲ್ಲಿ ಹೆಚ್ಚು ರಭಸವಾಗಿರುತ್ತದೆ. ಇಲ್ಲಿ ಸೇತುವೆ ಮತ್ತು ಮೆಟ್ಟಿಲುಗಳು ಇದ್ದು, ಜಲಪಾತದ ಜೊತೆ ನೀವೂ ಹತ್ತಬಹುದು... ಬೆಂಚ್‌ಗಳು ಕೂಡಾ ಇದ್ದು ಜಲಪಾತದ ಬದಿಯಲ್ಲಿ ನೀವು ಆಯಾಸ ತಣಿಸಿಕೊಳ್ಳಬಹುದು. ಇದರಿಂದಾಗಿ ನೀವು ಜಲಪಾತವನ್ನು ಸಮೀಪದಿಂದ ನೋಡಬಲ್ಲಿರಿ. ಸಸ್ಯಗಳು ಮತ್ತು ಇತರ ಮರಗಳ ಸುಂದರ ನೋಟ ಮತ್ತು ಜಲಪಾತ ಕರ್ಣಕಠೋರ ಧ್ವನಿಯಿಂದಾಗಿ ಮರೆಯಲಾರದ ಅನುಭವವೊಂದನ್ನು ನೀವು ಕಟ್ಟಿಕೊಳ್ಳುತ್ತೀರಿ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri