Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಅಬ್ಬಿ ಜಲಪಾತ

ಅಬ್ಬಿ ಜಲಪಾತ, ಕೊಡಗು

4

ಮಡಿಕೇರಿಯಿಂದ ಕೇವಲ 7-8  ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ.

ಮಡಿಕೇರಿಯ ಮೊದಲ ಕ್ಯಾಪ್ಟನ್‌ ನೆನಪಿಗೆ ಅವರ ಮಗಳು ಜೆಸ್ಸಿ  ಹೆಸರಿನಲ್ಲಿ ಬ್ರಿಟಿಷರು ಈ ಜಲಪಾತವನ್ನು ಗುರುತಿಸುತ್ತಿದ್ದರು. ಈಗಿನ ಹೆಸರು ಅಬ್ಬಿ ಅಥವಾ ಅಬ್ಬೆ ಎಂದರೆ ಕೊಡವ ಭಾಷೆಯಲ್ಲಿ ಜಲಪಾತ ಎಂದಾಗುತ್ತದೆ. ಪಶ್ಚಿಮ ಘಟ್ಟದ ಭಾಗದಲ್ಲಿರುವ ಅಬ್ಬಿ ಜಲಪಾತವು, ಕಲ್ಲು ಬಂಡೆಗಳು ಮತ್ತು ಗುಡ್ಡಗಳಿಂದ ವೇಗವಾಗಿ ಹರಿಯುವ ಸಣ್ಣ ಸಣ್ಣ ತೊರೆಗಳ ಸಮಗ್ರ ರೂಪ. ಈ ಪ್ರವಾಹವು ಅತ್ಯಂತ ವೇಗವಾಗಿ ಹರಿದು ಕೆಳಗೆ ಬೀಳುವುದರಿಂದಾಗಿ ಅತ್ಯಾಕರ್ಷಕ ನೋಟವೊಂದು ಕೆಳಗಿನಿಂದ ಸೃಷ್ಟಿಯಾಗುತ್ತದೆ. ಈ ಜಲಪಾತದ  ಸುತ್ತಲಿನ ಇಡೀ ಪರಿಸರವು ಪ್ರಶಾಂತವಾಗಿದೆ. ಬೀಳುವ ನೀರಿನಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಮಂಜಿನ ಪದರವು ನಿರ್ಮಾಣಗೊಳ್ಳುತ್ತದೆ. ಇದು ಕೆಳಗಿನಿಂದ ನೋಡುವವರಿಗೆ ಸುಂದರವಾಗಿ ಕಾಣುತ್ತದೆ. ಮಳೆಗಾಲದಲ್ಲಿ ಈ ಜಲಪಾತವು ತುಂಬಾ ನೀರನ್ನು ಹೊಂದಿರುತ್ತದೆ ಮತ್ತು ಬೇಸಿಗೆಕಾಲದಲ್ಲಿ ಒಣಗಿ ಹೋಗಿರುತ್ತದೆ. ಜಲಪಾತದ ಎದುರಿಗೆ ಒಂದು ತೂಗುಸೇತುವೆಯಿದ್ದು, ಪ್ರವಾಸಿಗರಿಗೆ ಸುಂದರವಾಗಿ ಕಾಣುತ್ತದೆ. ತೂಗುಸೇತುವೆಯ ಇನ್ನೊಂದೆಡೆ ಇರುವ ಕಾಳಿಮಠ ದೇವಸ್ಥಾನವನ್ನೂ ಕೂಡಾ ಪ್ರವಾಸಿಗರು ನೋಡಬೇಕು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue