ಸೋಮವಾರಪೇಟೆಯು ಕೊಡಗಿನ ಪಂಚಾಯತ್ ಪಟ್ಟಣ ಮತ್ತು ಸೋಮವಾರಪೇಟೆ ತಾಲೂಕಿನ ಪ್ರಮುಖ ಪಟ್ಟಣ ಕೂಡಾ ಹೌದು. ಸೋಮವಾರಪೇಟೆಯ ಸುತ್ತಮುತ್ತ ಇರುವ ಪ್ರಮುಖ ಪ್ರದೇಶಗಳೆಮದರೆ ಪುಷ್ಪಗಿರಿ ಬೆಟ್ಟ, ಕೋಟೆಬೆಟ್ಟ ಮತ್ತು ಮಕ್ಕಳಗುಡಿ ಬೆಟ್ಟ. ಪುಷ್ಪಗಿರಿಯು ಕೊಡಗಿನ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ. ಸೋಮವಾರಪೇಟೆಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಚಾರಣಿಗರು ಪುಷ್ಪಗಿರಿಯನ್ನು ನಡೆದು ತಲುಪಬಹುದು. ಚಾರಣವು ಭಾಬತಿಯಿಂದ ಆರಂಭವಾಗುತ್ತದೆ. ಇದು ಸುಮಾರು 10 ಕಿ.ಮೀ ದಾರಿ. ಕೋಟೆಬೆಟ್ಟವು ಕೊಡಗಿನ ಮೂರನೇ ಅತಿ ದೊಡ್ಡ ಬೆಟ್ಟ. ಇದು ಮಡಿಕೇರಿ ಮತ್ತು ಸೋಮವಾರಪೇಟೆಯ ಮಧ್ಯೆ ಇದೆ. ಕೋಟೆಬೆಟ್ಟವು ಬುಡದಿಂದ ಸುಮಾರು 10 ಕಿ.ಮೀ ದೂರವಿದೆ. ಗುಡ್ಡದ ಕೊನೆಗೆ ಶಿವ ದೇವಸ್ಥಾನವಿದೆ. ಈ ಬೆಟ್ಟಕ್ಕೆ ಚಾರಣ ಮಾಡುವಲ್ಲಿ ವಿಶೇಷ ಪರವಾನಗಿಯ ಅಗತ್ಯವಿಲ್ಲ ಆದರೆ ಸ್ಥಳೀಯ ಗೈಡ್‌ಗಳ ಮಾರ್ಗದರ್ಶನ ಪಡೆಯುವುದು ಉತ್ತಮ. ಮಕ್ಕಳಗುಡಿ ಬೆಟ್ಟವು ಹಾರಂಗಿ ಹಿನ್ನೀರಿನಲ್ಲಿರುವ ಪ್ರದೇಶವಾಗಿದೆ. ಇದು ತನ್ನ ವಿಶಾಲವಾದ ಪ್ರದೇಶ, ಅರಣ್ಯ ಮತ್ತು ಸೌಂದರ್ಯಕ್ಕೆ ಹೆಸರಾಗಿದೆ. ಇನ್ನೊಂದು ಪ್ರಮುಖ ಪ್ರದೇಶವಾದ ಮಲೆಮಲ್ಲೇಶ್ವರ ಬೆಟ್ಟವನ್ನು ನೀವು ನೋಡಲೇಬೇಕು. ಇದು ಸೋಮವಾರಪೇಟೆಯಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಈ ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬದಿಂದಾಗಿ ಪ್ರವಾಸಿಗರಲ್ಲಿ ಮಲೆಮಲ್ಲೇಶ್ವರ ಬೆಟ್ಟವು ಜನಪ್ರಿಯವಾಗಿದೆ.


Click it and Unblock the Notifications